ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿಗೆ ಪಾರ್ಥಿವ ಶರೀರ ರವಾನಿಗೆ ಅಡ್ಡಿ- ದೆಹಲಿಯಲ್ಲೇ ಸುರೇಶ್ ಅಂಗಡಿ ಅಂತ್ಯಕ್ರಿಯೆ

ನವದೆಹಲಿ: ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ ರೈಲ್ವೇ ಖಾತೆ ರಾಜ್ಯ ಸಚಿವ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದೆ.

ಕೊರೊನಾ ನಿಯಮಗಳ ಪ್ರಕಾರ ಸೋಂಕಿತರ ಮೃತದೇಹ ಸಾಗಿಸುವಂತಿಲ್ಲ. ಸೋಂಕಿತರು ಎಲ್ಲಿ ಸಾವನ್ನಪ್ಪುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ನಿಯಮವಿರುವ ಹಿನ್ನಲೆ ಅವರ ಶರೀರವನ್ನು ಹುಟ್ಟೂರಿಗೆ ಸಾಗಿಸಲು ಅಡ್ಡಿಯಾಗಿದೆ. ಇದರಿಂದ ಕುಟುಂಬಸ್ಥರಿಗೆ ದಿಕ್ಕು ತೋಚದಂತೆ ಆಗಿದೆ. ಈ ಹಿನ್ನೆಲೆ ಗುರುವಾರ ದೆಹಲಿಯ ಲೋಧಿ ಎಸ್ಟೇಟ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವಿಮಾನದಲ್ಲಿ ಪಾರ್ಥಿವ ಶರೀರ ಸಾಗಿಸಲು ಎಂಬಾಲ್ಮಿಂಗ್ ಮಾಡಬೇಕು. ಆದರೆ ಕೊರೊನಾ ಸೋಂಕಿತರ ಪಾರ್ಥೀವ ಶರೀರ ಎಂಬಾಲ್ಮಿಂಗ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ರಸ್ತೆ ಮೂಲಕ ಬೆಳಗಾವಿಗೆ ಪಾರ್ಥಿವ ಶರೀರವನ್ನು ಸಾಗಿಸಲು ಮುಂದಾದರೆ 48 ಗಂಟೆಗೂ ಅಧಿಕ ಸಮಯ ಬೇಕಾಗುತ್ತದೆ. ಹೀಗಾಗಿ ಏಮ್ಸ್ ವೈದ್ಯರು ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಸುವ ಬಗ್ಗೆ ಸೂಚನೆ ನೀಡಿದ್ದಾರೆ.

ಈಗಾಗಲೇ ದೆಹಲಿಯ ಏಮ್ಸ್ ಅಸ್ಪತ್ರೆಗೆ ಆಗಮಿಸಿ ಸುರೇಶ್ ಅಂಗಡಿಯವರ ಅಂತಿಮ ದರ್ಶನವನ್ನ ಕುಟುಂಬಸ್ಥರು ಪಡೆದುಕೊಂಡಿದ್ದಾರೆ. ರಾಜ್ಯ ಸಂಸದರು, ಕೇಂದ್ರ ಸಚಿವರು, ಬಿಜೆಪಿಯ ಗಣ್ಯರು ಏಮ್ಸ್ ಆಸ್ಪತ್ರೆಗೆ ಆಗಮಿಸಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

Edited By : Vijay Kumar
PublicNext

PublicNext

24/09/2020 12:20 am

Cinque Terre

76.33 K

Cinque Terre

0

ಸಂಬಂಧಿತ ಸುದ್ದಿ