ತುರುವೇಕೆರೆ: ಶಾಸಕರು ಎಂದರೆ ಒಂದಷ್ಟು ರೀತಿ-ರಿವಾಜುಗಳನ್ನು ಇಟ್ಟುಕೊಂಡು, ಜನಸಾಮಾನ್ಯರು ಮತ್ತು ಕಾರ್ಯಕರ್ತರೊಂದಿಗೆ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತಾರೆ. ಇನ್ನು ಕೆಲವು ಶಾಸಕರು ಜನಸಾಮಾನ್ಯರು ಮತ್ತು ಕಾರ್ಯಕರ್ತರಿಗೆ ಹತ್ತಿರವಾಗಿರಬೇಕು ಎಂದು ಅವರಲ್ಲಿ ತಾವು ಒಬ್ಬರಾಗಿ ಅವರು ಮಾಡುವ ಕೆಲಸವನ್ನು ತಾವು ಮಾಡುತ್ತಾರೆ.
ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಶುಕ್ರವಾರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ತಮಟೆ ಬಡಿಯುತ್ತಿದ್ದ ಕಲಾವಿದರೊಂದಿಗೆ ಸೇರಿ ಅರ್ಧ ಗಂಟೆಗೂ ಹೆಚ್ಚಿನ ಕಾಲ ತಮಟೆ ಬಾರಿಸುವ ಮೂಲಕ ಕಾರ್ಯಕರ್ತರೊಂದಿಗೆ ಕುಣಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಸಕರ ಈ ನಡೆಗೆ ಕ್ಷೇತ್ರದಾದ್ಯಂತ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದೆ.
PublicNext
23/07/2022 09:36 am