ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ನಂದಿ-ಶಿವೋತ್ಸವದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಭಾಗಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಡಾ: ಕೆ.ಸುಧಾಕರ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ನಂದಿ ಶಿವೋತ್ಸವ 2022ರ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರ ಉಪಸ್ಥಿತಿಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಚಿಕ್ಕಬಳ್ಳಾಪುರದ ಐತಿಹಾಸಿಕ ನಂದಿಗ್ರಾಮದಲ್ಲಿ ಇಂದು ಕಾರ್ಯಕ್ರಮನ್ನು ಉದ್ಘಾಟಿಸಿಲಾಯಿತು.

ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಭೋಗನಂದೀಶ್ವರ ದೇವಾಲಯ ಸುತ್ತಮುತ್ತಲ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಗೌರಿಬಿದನೂರು, ಸುತ್ತಾಮುತ್ತಾ ತುಂಬಾನೆ ಫೇಮಸ್. ಶಿವರಾತ್ರಿ ಹಬ್ಬದ ದಿನ ಇಲ್ಲಿಗೆ ರಾಜ್ಯ ಹೊರರಾಜ್ಯಗಳ ಸಾವಿರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇಂದು ಪ್ರತಿಷ್ಠಿತ ಕಾರ್ಯಕ್ರಮ ಆದ್ದರಿಂದ ಡಾ.ಸುಧಾಕರ್ ಇಡೀ ಕಾರ್ಯಕ್ರಮದ ನೇತೃತ್ವ ವಹಿಸಿ ಆಯೋಜಿಸಿದ್ದಾರೆ. ಐತಿಹಾಸಿಕ ಹಿನ್ನಲೆಯ ನಂದಿಗ್ರಾಮದ ಕಾರ್ಯಕ್ರಮ ಆದ್ದರಿಂದ ಇಂದು ಸಾವಿರಾರು ಜನ ಭಕ್ತರು ದೇವರ ದರ್ಶನಕ್ಕೆ ಆಗಮಿಸಿ ಪೂಜಾಕಾರ್ಯಗಳಲ್ಲಿ ತೊಡಗಿದ್ದರು. ಇಡೀ ರಾತ್ರಿ ಜಾಗರಣೆ ಇರುವುದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಖ್ಯಾತ ಸಂಗೀತ & ವಿದ್ವಾಂಸರಿಂದ ಜಿಲ್ಲಾಡಳಿತ ಆಯೋಜಿಸಿದೆ. ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಸಾವಿರಾರು ಜನ‌ ಆಗಮಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಉಕ್ರೇನ್ ನಲ್ಲಿ ಯುದ್ಧದ ಆತಂಕ ಇದ್ದರು ಶಿವರಾತ್ರಿ ಹಬ್ಬ ಯಶಸ್ವಿಯಾಗಿ ನಡೆಯಿತು..

ಚಿತ್ರದುರ್ಗ ಸಿರಿಗೆರೆ ತರಳಬಾಳು ಜಗದ್ಗುರು ಶಿವಮೂರ್ತಿಶಿವಾಚಾರ್ಯ ಸ್ವಾಮೀಜಿ, ಶ್ರೀ ಸತ್ಯಸಾಯಿ ಸೇವಾ ಆಶ್ರಮದ ಸದ್ಗುರು ಶ್ರೀ ಮಧುಸೂದನ್ ಸಾಯಿ, ಕೇಂದ್ರದ ಸಾಮಾಜಿಕ & ಸಬಲೀಕರಣ ರಾಜ್ಯ ಖಾತೆಸಚಿವ ಎ.ನಾರಾಯಣಸ್ವಾಮಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪೌರಾಡಳಿತ ಸಚಿವ MTB. ನಾಗರಾಜ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Edited By : Nagaraj Tulugeri
PublicNext

PublicNext

02/03/2022 08:13 am

Cinque Terre

98.12 K

Cinque Terre

1

ಸಂಬಂಧಿತ ಸುದ್ದಿ