ನವದೆಹಲಿ : ದೆಹಲಿಯ ಕರೋಲ್ ಬಾಗ್ ನಲ್ಲಿರುವ ಶ್ರೀ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರದಲ್ಲಿ ಪ್ರಧಾನಿ ಮೋದಿ ಇಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಗುರು ರವಿದಾಸ್ ಜಯಂತಿಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಕ್ತರೊಂದಿಗೆ ಕೀರ್ತನೆಯಲ್ಲಿ ಪ್ರಧಾನಿ ಭಾಗವಹಿಸಿದ್ದು ಗಮನ ಸೆಳೆದಿದೆ.
ಇನ್ನು ಪ್ರಧಾನಿ ಮೋದಿ ಪ್ರಧಾನಮಂತ್ರಿಯವರು ಭಕ್ತರೊಂದಿಗೆ ಸಂವಾದ ನಡೆಸಿ ದೇವಸ್ಥಾನದಲ್ಲಿ ‘ಶಾಬಾದ್ ಕೀರ್ತನೆ’ ಯಲ್ಲಿ ಭಾಗವಹಿಸಿದ ಬಗ್ಗೆ ಟ್ವಿಟ್ ಮಾಡಿದ್ದಾರೆ.
ಶಾಬಾದ್ ಕೀರ್ತನೆಯಲ್ಲಿ ಭಾಗವಹಿಸಿದ ವೀಡಿಯೊವನ್ನು ಹಂಚಿಕೊಂಡು "ದೆಹಲಿಯ ಶ್ರೀ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರದಲ್ಲಿ ಬಹಳ ವಿಶೇಷ ಕ್ಷಣಗಳು" ಎಂದು ಮೋದಿ ಬರೆದಿದ್ದಾರೆ.
ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರವಿದಾಸ್ ಜಯಂತಿಯ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಶುಭ ಹಾರೈಸಿದರು.
PublicNext
16/02/2022 03:28 pm