ವಾರಾಣಸಿ : ವಾರಾಣಸಿಯ ಕೇಂದ್ರ ಭಾಗದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಿದ್ದಾರೆ.
ಕೊನೆಗೂ ನಮೋ ಕನಸು ನನಸಾಗಿದೆ. ಕಾಶಿ ವಿಶ್ವನಾಥನ ಗತವೈಭವ ಮರುಕಳಿಸಲಿದೆ. ವಾರಣಸಿಯ ಪವಿತ್ರ ಸ್ಥಳದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದ ಅತೀದೊಡ್ಡ ದೇವಕಾರ್ಯಕ್ಕೆ ಸಕಲ ಸಿದ್ಧತೆಯಾಗಿದೆ.
ಈ ಯೋಜನೆಯಿಂದಾಗಿ ಪಾರಂಪರಿಕ ನಗರದಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ ಎಂದು ಆಶಿಸಲಾಗಿದೆ.
PublicNext
13/12/2021 11:42 am