ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷ್ಣ ಜನ್ಮಾಷ್ಟಮಿ : ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿದ ಸುಧಾ ಮೂರ್ತಿ ಅಳಿಯ ಸುನಕ್

ಬ್ರಿಟನ್ : ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಇನ್ನು ಈ ಜನ್ಮಾಷ್ಟಮಿಯ ಸಂದರ್ಭದಲ್ಲಿ, ಬ್ರಿಟನ್ ನಲ್ಲಿ ಪ್ರಧಾನಿ ಅಭ್ಯರ್ಥಿ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಅವರೊಂದಿಗೆ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ISKON) ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಸದ್ಯ ಶ್ರೀ ಕೃಷ್ಣನ ಪೂಜೆ ಮಾಡಿ ದರ್ಶನ ಪಡೆದ ಚಿತ್ರವನ್ನು ಟ್ವೀಟ್ ಮಾಡಿದ್ದು, ಇಂದು ನಾನು ನನ್ನ ಪತ್ನಿ ಅಕ್ಷತಾ ಅವರೊಂದಿಗೆ ಜನ್ಮಾಷ್ಟಮಿ ಆಚರಿಸಲು ಹೋಗಿದ್ದೆ. ಇದೊಂದು ಜನಪ್ರಿಯ ಹಿಂದೂ ಹಬ್ಬ ಎಂದು ಬರೆದಿದ್ದಾರೆ.

ಬ್ರಿಟನ್ ನಲ್ಲಿ ಪ್ರಧಾನಿ ಚುನಾವಣೆಯ ಪೈಪೋಟಿಯ ನಡುವೆಯೇ ಅವರು ದೇವಸ್ಥಾನಕ್ಕೆ ಭೇಟಿ ನೀಡಿರುವುದರಿಂದ ಸಾಮಾಜಿಕ ಮಾಧ್ಯಮದಲ್ಲಿ ಎರಡು ಬಣಗಳು ಹುಟ್ಟಿಕೊಂಡಿವೆ. ಜನ್ಮಾಷ್ಟಮಿಯಂದು ಅವರು ದೇವಸ್ಥಾನಕ್ಕೆ ಭೇಟಿ ನೀಡುವುದು ಸಾಮಾನ್ಯ ಎಂದು ಒಂದು ವರ್ಗ ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನೊಂದು ವರ್ಗ ಇದನ್ನು ರಾಜಕೀಯದೊಂದಿಗೆ ಸಂಬಂಧ ಕಲ್ಪಿಸಿ ಅನೇಕ ಪ್ರಶ್ನೆಗಳನ್ನೆಸೆದಿದೆ.

ಅದೇನೆ ಆಗಲಿ ವಿದೇಶದಲ್ಲಿ ದೇಶದ ಆಚರಣೆ ವಿಶೇಷವೇ ಸರಿ…

Edited By : Nirmala Aralikatti
PublicNext

PublicNext

19/08/2022 09:49 pm

Cinque Terre

109.6 K

Cinque Terre

2

ಸಂಬಂಧಿತ ಸುದ್ದಿ