ಬೆಂಗಳೂರು: ಕರ್ನಾಟಕ & ಗೋವಾ ರಾಜ್ಯಗಳ ಬಾಂಧವ್ಯ ಬಹಳ ಕಾಲದಿಂದಲೂ ಮುಂದುವರೆದುಕೊಂಡು ಬಂದಿದೆ. ಗೋವಾ ವಿಮೋಚನೆ ವೇಳೆ ಕನ್ನಡಿಗರ ತ್ಯಾಗ, ಬಲಿದಾನವನ್ನ ಗೋವನ್ನರು ಇಂದಿಗೂ ಸ್ಮರಿಸುತ್ತಾರೆ. ಉಭಯ ರಾಜ್ಯಗಳ ನಡುವೆ ಶೈಕ್ಷಣಿಕ ಬಾಂಧವ್ಯಕ್ಕೆ ಧಾರವಾಡ ಹಾಗೂ ಬೆಳಗಾವಿ ಸಾಕ್ಷಿಯಾಗಿತ್ತು. ಗೋವಾದ ಮೊದಲ ಮುಖ್ಯಮಂತ್ರಿ ಶಶಿಕಲಾ ಕಾಕೋಡಕರ್ ಹಾಗೂ ಭಾರತ ದೇಶದ ಮೊದಲ ವಿದೆಶಾಂಗ ಮಂತ್ರಿ ಗೋವಾದ ಎಡ್ವರ್ಡ್ ಫೇಲಿರೋ ಇಬ್ಬರೂ ಧಾರವಾಡದಲ್ಲಿ ಕಲಿತವರು.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗೋವಾದ ಅರ್ನಾಂಡೊ ಮೆನೆಜಿಸ್ ಪ್ರಾಚಾರ್ಯರಾಗಿ ಜನಮೆಚ್ಚುವ ಕೆಲಸ ಮಾಡಿದ್ದರು. ಇದರ ಪ್ರತೀಕವಾಗಿ ಇಂದಿಗೂ ಅವರ ಹೆಸರಿನಲ್ಲಿ ಧಾರವಾಡದಲ್ಲಿ ವೃತ್ತ ರಚಿಸಲಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ & ಗೋವಾ ರಾಜ್ಯಗಳ ನಡುವೆ ಸೌಹಾರ್ದಯುತ ಬಾಂಧವ್ಯ ಬೆಸೆಯಲು ಮುಂದಾಗಲಿದೆ. ಪರಿಷತ್ತು ರಾಜಕೀಯ ಹೊರತಾಗಿ ಸಾಹಿತ್ಯ, ಸಂಸ್ಕೃತಿ, ಕಲೆ, ಪರಂಪರೆಯೊಂದಿಗೆ ಮುನ್ನಡೆಯಲಿದೆ.ಈಗ ಕೊಂಕಣಿ, ಮರಾಠಿ ಹಾಗೂ ಪೋರ್ಚುಗಿಸ್ ಭಾಷೆಯ ಕಾರ್ಯಕ್ರಮ ನಡೆಸುವ ಮೂಲಕ ಭಾಷಾ ಸೌಹಾರ್ದವನ್ನು ಮೂಡಿಸುವಲ್ಲಿ ಕೆಲಸ ಮಾಡಿದ್ದೆ. ಸಾಹಿತ್ಯ, ಕಲೆ, ಸಂಸ್ಕೃತಿಗೆ ಭಾಷೆ ಅಡ್ಡಿಯಾಗಲಾರದು ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ನ್ಯೂಸ್
PublicNext
26/07/2022 09:12 am