ಚೆನ್ನೈ : ಆಂಧ್ರಪ್ರದೇಶ ಗಡಿಯಲ್ಲಿ ಸುಬ್ರಹ್ಮಣ್ಯ ಕ್ಷೇತ್ರ ತಿರುತ್ತಣಿಯಲ್ಲಿ ಸಿ. ಟಿ. ರವಿ, ಅಣ್ಣಾಮಲೈ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿನಲ್ಲಿ ಶುಕ್ರವಾರದಿಂದ ಡಿಸೆಂಬರ್ 6 ರವರೆಗೆ ‘ವೇಲ್ ಯಾತ್ರೆ’ (ಸುಬ್ರಹ್ಮಣ್ಯನ ಅಸ್ತ್ರವಾದ ‘ವೇಲಾಯುಧ’ ಯಾತ್ರೆ) ಕೈಗೊಳ್ಳಲು ಉದ್ದೇಶಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್, ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಕರ್ನಾಟಕ ಕೇಡರ್ ನಿವೃತ್ತ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಸೇರಿದಂತೆ ಹಲವಾರು ಮುಖಂಡರನ್ನು ಶುಕ್ರವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
.
‘ಕುರುಪ್ಪರ್ ಕೂಟಂ’ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಸುಬ್ರಹ್ಮಣ್ಯನ ಸ್ತುತಿ ಮಂತ್ರವಾದ ‘ಸ್ಕಂದ ಷಷ್ಠಿ ಕವಚಂ’ ಅನ್ನು ಅವಮಾನಿಸಲಾಗಿದೆ ಎನ್ನಲಾಗಿದ್ದು, ಇದರ ಹಿಂದೆ ತಮಿಳುನಾಡಿನ ಪ್ರಮುಖ ವಿಪಕ್ಷ ಡಿಎಂಕೆ ಇದೆ ಎಂಬುದು ಬಿಜೆಪಿ ಆರೋಪ.
ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಡಿಸೆಂಬರ್ 6ರವರೆಗೆ (ಬಾಬ್ರಿ ಮಸೀದಿ ಧ್ವಂಸ ದಿನ) ತಮಿಳುನಾಡಿನಲ್ಲಿ ‘ವೇಲ್ ಯಾತ್ರೆ’ ಕೈಗೊಳ್ಳಲು ಕೈಗೊಳ್ಳಲು ಬಿಜೆಪಿ ಉದ್ದೇಶಿಸಿತ್ತು.
ಯಾತ್ರೆ ವಿರುದ್ಧ ಮದ್ರಾಸ್ ಹೈಕೋರ್ಟ್ ನಲ್ಲಿ 2 ಅರ್ಜಿಗಳು ಸಲ್ಲಿಕೆ ಆಗಿದ್ದವು.
ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಯಾತ್ರೆಗೆ ಸರ್ಕಾರ ನಿರಾಕರಿಸಿತ್ತು. ಆದರೂ ಯಾತ್ರೆ ಆರಂಭಿಸಲು ಮುಂದಾದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
PublicNext
07/11/2020 11:41 am