ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್‌ ಸಿಎಂಗೆ ವಿದ್ಯಾರ್ಥಿನಿಯರ ಭವಿಷ್ಯಕ್ಕಿಂತ 'ರಾಜಕೀಯ ಶಕ್ತಿ ಪ್ರದರ್ಶನ'ವೇ ಮುಖ್ಯವಾಯಿತೇ?

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸೆಪ್ಟೆಂಬರ್ 22ರಂದು ವಿಶೇಷ ಅಸೆಂಬ್ಲಿ ಅಧಿವೇಶನವನ್ನು ಕರೆದಿದ್ದು, ರಾಜ್ಯದಲ್ಲಿ ಆಪ್ ಶಾಸಕರು 'ಆಪರೇಷನ್ ಕಮಲ'ದ ಹೇಳಿಕೆಗಳ ನಡುವೆ ವಿಶ್ವಾಸ ಮತವನ್ನು ಕೋರಿದ್ದಾರೆ.

ಕಳೆದ ವಾರ, ರಾಜ್ಯ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ, ಬಿಜೆಪಿಯು ಎಎಪಿಯ 7ರಿಂದ 10 ಶಾಸಕರನ್ನು ಸಂಪರ್ಕಿಸಿದೆ. ತಮ್ಮ ಪಕ್ಷ ಸೇರಲು ಶಾಸಕರಿಗೆ ತಲಾ 25 ಕೋಟಿ ರೂ.ವರೆಗೆ ನೀಡುವುದಾಗಿ ತಿಳಿಸಿದೆ ಎಂದು ಆರೋಪಿಸಿದ್ದರು.

ಪಂಜಾಬ್‌ನಲ್ಲಿ117 ವಿಧಾನಸಭಾ ಸ್ಥಾನಗಳ ಪೈಕಿ ಆಮ್ ಆದ್ಮಿ ಪಾರ್ಟಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಅತೀ ದೊಡ್ಡ ಪಾರ್ಟಿಯಾಗಿ ಸರ್ಕಾರ ರಚಿಸಿದೆ. ಕಾಂಗ್ರೆಸ್ 18 ಸ್ಥಾನ ಗೆದ್ದಿದ್ದರೆ, ಬಿಜೆಪಿ ಗೆದ್ದಿರುವುದು ಕೇವಲ 2 ಸ್ಥಾನ ಮಾತ್ರ. ಹೀಗಾಗಿ ಭಗವಂತ್ ಮಾನ್ ಬಹುಮತ ಸಾಬೀತು ಅವಶ್ಯಕತೆ ಸದ್ಯಕಿಲ್ಲ. ಬಹುಮತ ಸಾಬೀತು ಮಾಡಬೇಕಾದ ಪರಿಸ್ಥಿತಿಯೂ ಬಂದಿಲ್ಲ. ಆದರೆ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಈ ವಿಶ್ವಾಸಮತ ಯಾಚನೆಯನ್ನು ಆಪ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಪ್ರತಿಭಟನೆ ತಣ್ಣಗಾಗಿದೆಯಾದರೂ ಮುಂಜಾಗ್ರತಾ ಕ್ರಮವಾಗಿ ಸೆ.24ರವರೆಗೂ ವಿವಿಗೆ ರಜೆ ಘೋಷಿಸಲಾಗಿದೆ. ಇಂತಹ ಸಮಯದಲ್ಲಿ ರಾಜಕೀಯ ಶಕ್ತಿ ಪ್ರದರ್ಶನ ಅಗತ್ಯವಿತ್ತೇ ಎನ್ನುವ ಮಾತುಗಳು ಕೇಳಿಬರುತ್ತಿದೆ.

Edited By : Vijay Kumar
PublicNext

PublicNext

19/09/2022 05:37 pm

Cinque Terre

65.56 K

Cinque Terre

4

ಸಂಬಂಧಿತ ಸುದ್ದಿ