ಶಿವಮೊಗ್ಗ: ಕಿಡಿಗೇಡಿಗಳಿಂದ ಚೂರಿ ಇರಿತಕ್ಕೊಳಗಾದ ಶಿವಮೊಗ್ಗದ ಯುವಕ ಪ್ರೇಮ್ ಸಿಂಗ್ ಸದ್ಯ ನಗರದ ಮೆಗ್ಗಾನ್ ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರೇಮ್ ಸಿಂಗ್‌ನನ್ನು ಭೇಟಿಯಾದ ಬಿಜೆಪಿ ನಾಯಕರಾದ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಹಾಗೂ ಬಿ.ಎಲ್ ಸಂತೋಷ್ ಅವರು ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ.
ಇದೇ ವೇಳೆ ಪ್ರೇಮ್ ಸಿಂಗ್ ಜೊತೆ ಮಾತನಾಡಿದ ಬಿ.ಎಲ್ ಸಂತೋಷ್, ನಿಮ್ಮ ಮೇಲೆ ನಡೆದ ಕೃತ್ಯ ಖಂಡನೀಯ. ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇವೆ ಎಂದು ಭರವಸೆ ನೀಡಿದ್ದಾರೆ.
PublicNext
17/08/2022 06:12 pm