ಅಗರ್ತಲಾ: ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ 'ಭಾರತ್ ಜೋಡೋ ಯಾತ್ರೆ' ವೇಳೆ ಗುರುವಾರ ಅಪರಿಚಿತರು ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಸುದೀಪ್ ಅವರ ತಲೆಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದೀಪ್ ಮತ್ತು ಇತರ ನಾಯಕರ ಮೇಲಿನ ದಾಳಿಗೆ "ಬಿಜೆಪಿ ಗೂಂಡಾಗಳು" ಕಾರಣ ಎಂದು ತ್ರಿಪುರಾ ಕಾಂಗ್ರೆಸ್ ಆರೋಪಿಸಿದೆ. ಸುದೀಪ್ ಅವರ ಕಾರಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎಂದು ಕಾಂಗ್ರೆಸ್‌ನ ಬಿರಾಜಿತ್ ಸಿಂಗ್ ದೂರಿದ್ದಾರೆ. ಇತರ ಕೆಲ ಕಾಂಗ್ರೆಸ್ ಸದಸ್ಯರೂ ಹಲ್ಲೆಯಲ್ಲಿ ಗಾಯಗೊಂಡಿದ್ದಾರೆ.
PublicNext
11/08/2022 11:22 pm