ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸದ್ದಿಲ್ಲದೇ 2ನೇ ಮದ್ವೆಯಾದ್ರಾ 'ಕೈ' ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ.?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಸದ್ದಿಲ್ಲದೇ 2ನೇ ಮದ್ವೆಯಾದ್ರಾ ಎನ್ನುವ ಪ್ರಶ್ನೆ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ವೈರಲ್ ಫೋಟೋಗಳು.

ಹೌದು. ನಟಿ, ಮಾಡೇಲ್ ಪೂಜಾಶ್ರಿ ಎಸ್ ಎಂಬುವರನ್ನು ವಿಜಯಾನಂದ ಕಾಶಪ್ಪನವರ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಜೋಡಿಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಹೆಣ್ಣು ಮಗುವೊಂದರ ಜನನ ಪ್ರಮಾಣ ಪತ್ರದ ತಂದೆಯ ಕಾಲಂ ಎದುರಿನಲ್ಲಿ ‘ವಿಜಯಾನಂದ ಕಾಶಪ್ಪನವರ’ ಎಂಬ ಉಲ್ಲೇಖವಿದೆ. ಈ ಪ್ರಮಾಣಪತ್ರವು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಹೆಸರು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರದೇ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವೈರಲ್ ಆಗಿರುವ ಪ್ರಮಾಣ ಪತ್ರದಲ್ಲಿ ತಾಯಿಯ ಹೆಸರು ‘ಪೂಜಾಶ್ರಿ ಎಸ್' ಎಂದು ಉಲ್ಲೇಖಗೊಂಡಿದೆ. ಇದು ವಿಜಯಾನಂದ ಕಾಶಪ್ಪನವರ ಅವರು ಪೂಜಾಶ್ರಿ ಎಂಬ ನಟಿಯ ಜೊತೆ ಎರಡನೇ ಮದುವೆ ಆಗಿದ್ದಾರಾ ಎಂಬ ಅನುಮಾನಗಳಿಗೆ ಕಾರಣವಾಗಿದೆ. ಇವರ ಮದುವೆ ಒಂದು ವರ್ಷದ ಹಿಂದೆ ನಡೆದಿದೆ ಎಂದು ಹೇಳಲಾಗುತ್ತಿದೆ.

Edited By : Vijay Kumar
PublicNext

PublicNext

23/07/2022 04:28 pm

Cinque Terre

58.53 K

Cinque Terre

9

ಸಂಬಂಧಿತ ಸುದ್ದಿ