ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಭೋವಿ ಶ್ರೀ, ಶಾಸಕರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್

ಪಾವಗಡ: ಭೋವಿ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ, ಹೊಳಲ್ಕೆರೆ ಶಾಸಕ, ಹೊಸದುರ್ಗ ಶಾಸಕ, ಭೋವಿ ಸಮಾಜದ ಪಾವಗಡ ಶಾಸಕ ವೆಂಕಟರಮಣಪ್ಪ ಸೇರಿ ಇತರೆ ಶಾಸಕರು ಮತ್ತು ಸಮುದಾಯದ ಗಣ್ಯರು ಸೇರಿ ಒಟ್ಟು 12 ಜನರಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ ಠಾಣೆ ಪೊಲೀಸರು ಡಾ.ತಿಪ್ಪೇರುದ್ರಸ್ವಾಮಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯು ಜುಲೈ 14ರಂದು ಕೆಎಸ್‌ಪಿ ಆ್ಯಪ್ ಮೂಲಕ ಜಿಲ್ಲಾ ಪೊಲೀಸ್ ಕಚೇರಿಗೆ ಪ್ರಾಣ ಬೆದರಿಕೆಯ ಸಂದೇಶ ರವಾನಿಸಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 15ರಂದು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜುಲೈ 16ರಂದು ಬೆದರಿಕೆ ಸಂದೇಶ ಕಳುಹಿಸಿದ ಡಾ.ತಿಪ್ಪೇರುದ್ರಸ್ವಾಮಿ ಅವರನ್ನು ಬಂಧಿಸಿದ್ದಾರೆ. ಆದರೆ ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿ ರಾಷ್ಟ್ರೀಯ ವಡ್ಡರ ಸೇನೆ ಅಧ್ಯಕ್ಷ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಆರೋಪಿಯು ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ತಿಳಿದು ಬಂದಿದೆ. ಆರೋಪಿ ಡಾ. ತಿಪ್ಪೇರುದ್ರ ಸ್ವಾಮಿ ಅಖಿಲ ಕರ್ನಾಟಕ ವಡ್ಡರ ಭೋವಿ ಸಂಘಕ್ಕೆ ಪರ್ಯಾಯವಾಗಿ ರಾಷ್ಟ್ರೀಯ ವಡ್ಡರ ಸೇನೆ ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಜುಲೈ 1ರಂದು ಧಾರವಾಡದಲ್ಲಿ ಸಮಾವೇಶ ನಡೆಸಿದ್ದು, ಈ ಸಮಾವೇಶ ನಡೆಸಿದ ನಂತರ ಅಖಿಲ ಕರ್ನಾಟಕ ವಡ್ಡರ ಭೋವಿ ಸಂಘದವರಾದ ಪ್ರಕಾಶ ನೆಲಮಂಗಲ ಕೊಟ್ರೇಶ್ ಬಳ್ಳಾರಿ , ವೆಂಕಟೇಶ್ ಮೌರ್ಯ ಮತ್ತು ಚಂದ್ರಶೇಖರ್ ಸ್ವಾಮೀಜಿ ರಾಯಭಾಗ ಅವರುಗಳು ಪೋನ್ ಮಾಡಿ ಆರೋಪಿಗೆ ಕಿರುಕುಳ ನೀಡಿದ್ದರಿಂದ ಬೇಸತ್ತಿದ್ದ. ಬಳಿಕ ಅವರುಗಳಿಗೆ ತೊಂದರೆ ನೀಡುವ ಉದ್ದೇಶದಿಂದ ಈ ರೀತಿಯ ಸುಳ್ಳು ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಈವರೆಗಿನ ತನಿಖೆಯಿಂದ ಮಾಹಿತಿ ಲಭ್ಯವಾಗಿದೆ. ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.

Edited By : Vijay Kumar
PublicNext

PublicNext

18/07/2022 08:02 am

Cinque Terre

40.62 K

Cinque Terre

1

ಸಂಬಂಧಿತ ಸುದ್ದಿ