ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಹಾಡಹಗಲೇ ಹರಿದ ನೆತ್ತರು.!- ಪುರಸಭೆ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆ

ಕಲಬುರಗಿ: ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ನಗರಸಭೆ ಅಧ್ಯಕ್ಷೆ ಪತಿ, ಪುರಸಭೆ ಮಾಜಿ ಅಧ್ಯಕ್ಷನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಈ ಘಟನೆಯು ಕಲಬುರಗಿ ಜಿಲ್ಲೆಯ ಶಹಬಾದ್ ನಡೆದಿದೆ. ಶಹಬಾದ್ ಪುರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೂರ್(40) ಕೊಲೆಯಾದ ವ್ಯಕ್ತಿ. ಕಾಂಗ್ರೆಸ್ ಪಕ್ಷದ ಮುಖಂಡನಾಗಿರುವ ಗಿರೀಶ್ ಕಂಬನೂರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಳೆ ವೈಷಮ್ಯವೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.

ಶಹಬಾದ್ ಗಿರೀಶ್ ಕಂಬಾನೂರ್ ಮೇಲೆ ಅಟ್ಯಾಕ್ ಮಾಡಿ, ಹಾಡಹಗಲೇ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಗಿರೀಶ್, ಶಹಬಾದ್ ಪುರಸಭೆ ಮಾಜಿ ಅಧ್ಯಕ್ಷರಾಗಿದ್ದರು. ಗಿರೀಶ ಪತ್ನಿ ಸದ್ಯ ಶಹಬಾದ್ ನಗರಸಭೆ ಅಧ್ಯಕ್ಷೆಯಾಗಿದ್ದಾರೆ. ಎರಡು ವರ್ಷದ ಹಿಂದೆ ಗಿರೀಶ್ ಸಹೋದರನ ಬರ್ಬರ ಕೊಲೆಯಾಗಿತ್ತು. ಶಹಬಾದ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Vijay Kumar
PublicNext

PublicNext

11/07/2022 05:34 pm

Cinque Terre

51.16 K

Cinque Terre

4

ಸಂಬಂಧಿತ ಸುದ್ದಿ