ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಅಡಿಗದ ಸತ್ಯ ಒಂದೊಂದೆ ಬಯಾಗುತ್ತಿದೆ. ಈ ಕೇಸ್‌ನಲ್ಲೀಗ ಕಾಂಗ್ರೆಸ್ ಶಾಸಕರ ಮಗ ಹಾಗೂ ಸಹೋದರ ಭಾಗಿ ಆಗಿರೋ ಸತ್ಯವೂ ಈಗ ಹೊರ ಬಿದ್ದಿದೆ.
ಹೌದು. ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ್ ಪಾಟೀಲ್ ಹಾಗೂ ಪಾಟೀಲರ ಸಹೋದರ ಎಸ್.ವೈ.ಪಾಟೀಲರಿಗೂ ಈಗ ಸಂಕಷ್ಟ ಎದುರಾಗಿದೆ.
ಶಾಸಕ ಎಂ.ವೈ.ಪಾಟೀಲರ ಗನ್ ಮ್ಯಾನ್ ಹಯ್ಯಾಳಿ ದೇಸಾಯಿಯನ್ನ ಪಿಎಸ್‌ಐ ಮಾಡುವ ಉದ್ದೇಶದಿಂದಲೇ ಅಕ್ರಮ ನಡೆದಿದೆ ಎಂದು ಶಂಕಿಸಲಾಗಿದೆ. ಪಿ.ಎಸ್.ಐ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಈ ಸತ್ಯವನ್ನ ಸಿಐಡಿ ಮುಂದೆ ಬಾಯಿಬಿಟ್ಟಿದ್ದಾನೆನ್ನಲಾಗಿದೆ.
PublicNext
11/07/2022 09:30 am