ಮಂಡ್ಯ: ಉನ್ನತೀಕರಿಸಿದ ಸರಕಾರಿ ಐಟಿಐ ಕಾಲೇಜಿನ ಉದ್ಘಾಟನೆ ವೇಳೆ ಜೆಡಿಎಸ್ ಶಾಸಕ ಎಂ ಶ್ರೀನಿವಾಸ್ ಪ್ರಾಚಾರ್ಯರ ಕೆನ್ನೆಗೆ ಹೊಡೆದಿದ್ದಾರೆ. ಹಾಗೂ ನೆರೆದಿದ್ದವರ ಎದುರು ನಿಂದಿಸಿದ್ದಾರೆ.
ಕಾಲೇಜಿನ ಕಂಪ್ಯೂಟರ್ ವಿಭಾಗ ವೀಕ್ಷಣೆ ವೇಳೆ ಪ್ರಾಚಾರ್ಯ ಆರ್. ನಾಗಾನಂದ್ ಅಲ್ಲಿರಲಿಲ್ಲ. ಇದರ ಮಾಹಿತಿಗಾಗಿ ಶಾಸಕ ಶ್ರೀನಿವಾಸ್, ಪ್ರಾಚಾರ್ಯ ಎಲ್ಲಿ ಎಂದು ಹುಡುಕಾಡಿದ್ದಾರೆ. ಆದ್ರೆ ಪ್ರಾಚಾರ್ಯ ನಾಗಾನಂದ್ 30 ಸೆಕೆಂಡ್ ತಡವಾಗಿ ಬಂದ ಕಾರಣಕ್ಕೆ ಶ್ರೀನಿವಾಸ್ ಕುಪಿತಗೊಂಡು ಕೆನ್ನೆಗೆ ಹೊಡೆದಿದ್ದಾರೆ. ಇದೇ ವೇಳೆ ಸ್ಥಳೀಯರು ಶಾಸಕರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ.
PublicNext
20/06/2022 11:11 pm