ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಲಂಗಾಣ ಸಿಎಂ ಕೆ.ಸಿ ರಾವ್‌ಗೆ ಅವಮಾನ: ಬಿಜೆಪಿ ನಾಯಕನ ಬಂಧನ

ಹೈದರಾಬಾದ್: ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರಿಗೆ ಅವಮಾನ ಮಾಡಿದ್ದಾರೆಂಬ ಆಪಾದನೆ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರನ್ನು ಬಂಧಿಸಲಾಗಿದೆ.

ಜಿಟ್ಟಾ ಬಾಲಕೃಷ್ಣ ರೆಡ್ಡಿ ಎಂಬುವರೇ ಬಂಧನಕ್ಕೊಳಗಾದವರು. ಇನ್ನು ಬಿಜೆಪಿಯ ಇನ್ನೋರ್ವ ನಾಯಕ ಸಂಜಯ್ ಕುಮಾರ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ನಾಟಕದಲ್ಲಿ ಕೆಸಿಆರ್ ವಿರುದ್ಧ ವೈಯಕ್ತಿಕ ಟೀಕೆ ಮಾಡಲಾಗಿದೆ ಎಂದು ಆರೋಪಿಸಿ ಟಿಆರ್‌ಎಸ್ ಸಾಮಾಜಿಕ ಮಾಧ್ಯಮ ವಿಭಾಗದ ಸದಸ್ಯ ವೈ ಸತೀಶ್ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದರು. ಸತೀಶ್ ರೆಡ್ಡಿ ತಮ್ಮ ದೂರಿನಲ್ಲಿ, ಬಂಡಿ ಸಂಜಯ್, ಜಿಟ್ಟಾ ಬಾಲಕೃಷ್ಣ ರೆಡ್ಡಿ, ರಾಣಿ ರುದ್ರಮ್ಮ, ಬೊಡ್ಡು ಯೆಲ್ಲಣ್ಣ ಅಲಿಯಾಸ್ ಸರುವು ಯೆಲ್ಲಣ್ಣ ಹಾಗೂ ಅವರ ತಂಡ ಜನರ ದಾರಿ ತಪ್ಪಿಸುವ ಉದ್ದೇಶದಿಂದ ಸಿಎಂ ಹಾಗೂ ಸರ್ಕಾರದ ವಿರುದ್ಧ ಸುಳ್ಳು ಆರೋಪ ಹೊರಿಸಿ, ಸರ್ಕಾರದ ಯೋಜನೆಗಳನ್ನು ದೂಷಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಿಟ್ಟಾ ಬಾಲಕೃಷ್ಣ ರೆಡ್ಡಿ ಅವರನ್ನು ಬಂಧಿಸಿದ್ದಾರೆ.

Edited By : Nagaraj Tulugeri
PublicNext

PublicNext

10/06/2022 05:45 pm

Cinque Terre

52.14 K

Cinque Terre

1

ಸಂಬಂಧಿತ ಸುದ್ದಿ