ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಯಲ್ಲಿಯೇ ಮಡದಿಗೆ ಗುಂಡಿಟ್ಟು ಕೊಂದ ಕಾಂಗ್ರೆಸ್ ನಾಯಕ

ಗ್ವಾಲಿಯರ್: ಮಧ್ಯ ಪ್ರದೇಶ ಗ್ವಾಲಿಯಾರ್ ಕಾಂಗ್ರೆಸ್ ನಾಯಕ ರಿಷಭ್ ಭದೋರಿಯಾ, ತಮ್ಮ ಮನೆಯಲ್ಲಿಯೇ ಪತ್ನಿ ಭಾವನಾ ಭದೋರಿಯಾಳನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.ರಿಷಬ್ ರೌಡಿ ಶೀಟರ್ ಆಗಿದ್ದು, ಅಪರಾಧ ಕೃತ್ಯಗಳು ಆತನಿಗೆ ಹೊಸದಲ್ಲ ಎಂದು ಮಾಧ್ಯಮ ವರದಿಗಳು ಹೇಳಿವೆ.

ಭಾವನಾ ಭದೋರಿಯಾಳ ಹತ್ಯೆ ಆಗಿರುವ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮಿಗೆ ಸೋಮವಾರ ಕರೆ ಬಂದಿತ್ತು. ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ತೆರಳಿದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಅಪರಾಧ ಸ್ಥಳಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಧಿವಿಜ್ಞಾನ ಪರಿಣತರು ಸ್ಥಳಕ್ಕಾಗಮಿಸಿದ್ದು, ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಅಪರಾಧ ಕೃತ್ಯ ನಡೆದ ಸ್ಥಳದಿಂದ ಬೆರಳಚ್ಚುಗಳನ್ನು ಸಂಗ್ರಹಿಸಲಾಗಿದೆ. ಅಪರಾಧ ಎಸಗಿದ ರಿಷಭ್ ಭದೋರಿಯಾ ಸ್ಥಳದಿಂದ ನಾಪತ್ತೆಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ರಿಷಬ್ ಭದೋರಿಯಾ ಈಗಾಗಲೇ ನಾಲ್ಕು ಕೊಲೆ ಮತ್ತು ಒಂದು ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

07/06/2022 11:44 am

Cinque Terre

66.17 K

Cinque Terre

5