ರಾಮನಗರ: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬರೀ 18–20 ಜನ ಹುಡುಗರನ್ನ ಅರೆಸ್ಟ್ ಮಾಡಿದ್ರೆ ಮುಗೀತಾ? ನಮಗೂ ಎಲ್ಲ ವಿಚಾರ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಮಾಗಡಿಯ ದರ್ಶನ್ ಗೌಡ ಇಂದು ಅರೆಸ್ಟ್ ಆಗಿರುವ ವಿಚಾರವಾಗಿ ಕನಕಪುರದ ಯಡಮಾರನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನನಗೆ ಏನು ಸತ್ಯ ಗೊತ್ತಿತ್ತು ಅದರ ಆಧಾರದ ಮೇಲೆ ಹೇಳಿದ್ದೆ. ಅವತ್ತು ಸಿಐಡಿಯವರು ಕರೆದುಕೊಂಡು ಹೋಗಿದ್ದರು, ಮತ್ತೆ ಕಳುಹಿಸಿದ್ದರು. ವಿಚಾರಣೆ ಮಾಡದೇ ಹೇಗೆ ಹೇಳಲು ಸಾಧ್ಯ? ಫೋನ್ ಯಾರು ಮಾಡಿದ್ದರು? ಯಾಕೆ ಮಾಡಿದ್ದರು ಎಂಬುದು ಹೇಳಿರಲಿಲ್ಲ. ಬಹಳ ಅಬ್ಬರದಿಂದ ಸರ್ಕಾರದವರು, ಮಂತ್ರಿಗಳು ಮಾತನಾಡುತ್ತಿದ್ದರು. ಈಗ ಕರೆದುಕೊಂಡು ಹೋಗಿದ್ದಾರೆ. ನಮಗೆ ಎಲ್ಲಾ ಗೊತ್ತಿತ್ತು. ನಮ್ಮ ಜಿಲ್ಲೆಯಲ್ಲಿ ಎಷ್ಟು ಜನ ಪಾಸಾಗಿದ್ದಾರೆ ಎನ್ನುವುದನ್ನು ಮುಚ್ಚಿ ಹಾಕುವುದಕ್ಕೆ ಏನೇನು ಪ್ರಯತ್ನ ಮಾಡಿದ್ದರು. ಈಗ ಕರೆದುಕೊಂಡು ಹೋಗಿ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
06/06/2022 08:07 pm