ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಯಕ ಸಿಧು ಮೂಸೆವಾಲಾ ಹತ್ಯೆ: ಭಾಗಿಯಾದ ಯಾರನ್ನೂ ಸುಮ್ನೆ ಬಿಡಲ್ಲ ಎಂದ ಪಂಜಾಬ್ ಸಿಎಂ

ಚಂಡೀಗಢ: ಪಂಜಾಬ್‌ನ ಅಂತರಾಷ್ಟ್ರೀಯ ಖ್ಯಾತಿಯ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯಿಂದ ಅವರ ಅಭಿಮಾನಿಗಳಿಗೆ ಆಘಾತವಾಗಿದೆ. ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರೂ ಆಗಿದ್ದ ಇವರ ಹತ್ಯೆಯನ್ನು ಖಂಡಿಸಿರುವ ಪಂಜಾಬ್ ಸಿಎಂ ಭಗವಂತ್ ಮಾನ್, ಮೂಸೆವಾಲಾ ಅವರ ಮೇಲೆ ದಾಳಿ ಮಾಡಿದವರನ್ನು ಬಿಡುವುದಿಲ್ಲ. ಪ್ರಕರಣದಿಂದ ಪಂಜಾಬ್‌ನಲ್ಲಿ ಕೋಲಾಹಲವೆದ್ದಿದ್ದು, ಎಲ್ಲರೂ ಶಾಂತವಾಗಿರುವಂತೆ ಸಿಎಂ ಮನವಿ ಮಾಡಿದ್ದಾರೆ.

“ಸಿಧು ಮೂಸೆವಾಲಾ ಅವರ ಭೀಕರ ಹತ್ಯೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ತೀವ್ರವಾಗಿ ದುಃಖಿತನಾಗಿದ್ದೇನೆ. ಇದರಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡಲಾಗುವುದಿಲ್ಲ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಪ್ರಪಂಚದಾದ್ಯಂತದ ಅವರ ಅಭಿಮಾನಿಗಳೊಂದಿಗೆ ಇವೆ. ನಾನು ಶಾಂತವಾಗಿರುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ಭಗವಂತಾ ಮಾನ್ ಟ್ವೀಟ್ ಮಾಡಿದ್ದಾರೆ.

ಸಿಧು ಮೂಸ್ ವಾಲಾ ಅವರ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂತೆಗೆದುಕೊಂಡ ಒಂದು ದಿನದ ಬಳಿಕ ಪಂಜಾಬ್‌ನ ಮಾನ್ಸಾದಲ್ಲಿ ಅವರ ಮೇಲೆಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಗವಂತ್ ಮಾನ್ ಸರ್ಕಾರ ನಿನ್ನೆ 424 ಜನರ ಭದ್ರತೆಯನ್ನು ಹಿಂಪಡೆದಿತ್ತು.

Edited By : Nagaraj Tulugeri
PublicNext

PublicNext

30/05/2022 08:29 am

Cinque Terre

40.35 K

Cinque Terre

2

ಸಂಬಂಧಿತ ಸುದ್ದಿ