ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎ‌ಎಪಿ ಮಾಜಿ ಸಚಿವ ವಿಜಯ್ ಸಿಂಗ್ಲಾಗೆ 14 ದಿನಗಳ ನ್ಯಾಯಾಂಗ ಬಂಧನ

ನವದೆಹಲಿ: ಕಾಮಗಾರಿಗಳಲ್ಲಿ 1%ರಷ್ಟು ಕಮಿಷನ್ ಪಡೆಯುತ್ತಿದ್ದ ಆರೋಪದ ಮೇಲೆ ಬಂಧಿತರಾಗಿರುವ ಪಂಜಾಬ್ ಎ‌ಎಪಿ ಸರ್ಕಾರದ ಮಾಜಿ ಸಚಿವ ವಿಜಯ್ ಸಿಂಗ್ಲಾಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪೊಲೀಸರು ವಿಜಯ್ ಸಿಂಗ್ಲಾ ಅವರನ್ನು ಮೊಹಾಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು 14 ದಿನಗಳವರೆಗೆ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಕಾಮಗಾರಿ ಗುತ್ತಿಗೆ ವಿಚಾರದಲ್ಲಿ 1% ಕಮಿಷನ್ ಪಡೆಯುತ್ತಿದ್ದರು ಎಂದು ವಿಜಯ್ ಸಿಂಗ್ಲಾ ಮೇಲೆ ಆರೋಪ ಕೇಳಿ ಬಂದಿತ್ತು. ನಂತರ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಸಿಂಗ್ಲಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದರು. ಇದೇ ಅರೋಪದ ಮೇಲೆ ಪೊಲೀಸರು ವಿಜಯ್ ಸಿಂಗ್ಲಾ ಅವರನ್ನು ಬಂಧಿಸಿದ್ದಾರೆ.

Edited By : Nagaraj Tulugeri
PublicNext

PublicNext

27/05/2022 05:44 pm

Cinque Terre

38.93 K

Cinque Terre

0

ಸಂಬಂಧಿತ ಸುದ್ದಿ