ಚಂಡೀಗಢ: ಸೂಕ್ತ ಸಾಕ್ಷಾಧಾರಗಳು ಸಿಕ್ಕ ನಂತರದ ಪಂಜಾಬ್‌ನ ಆಮ್ ಆದ್ಮಿ ಸರ್ಕಾರದ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಸಿಎಂ ಭಗವಂತ್ ಮಾನ್ ಮಂಗಳವಾರ ಸಂಪುಟದಿಂದ ವಾಹ ಮಾಡಿದ್ದಾರೆ. ವಜಾಗೊಳಿಸಿದ ನಂತರ ವಿಜಯ್ ಸಿಂಗ್ಲಾ ಅವರನ್ನು ಬಂಧಿಸಲಾಗಿದೆ.
ಗುತ್ತಿಗೆ ಕಾಮಗಾರಿಗಳಲ್ಲಿ ಸಿಂಗ್ಲಾ ಅವರು ಕಮಿಷನ್‌ಗೆ ಬೇಡಿಕೆಯಿಡುತ್ತಿದ್ದರು. ಮತ್ತು ಶೇಕಡಾ ಒಂದರಷ್ಟು ಕಮಿಷನ್‌ಗಾಗಿ ಅಧಿಕಾರಿಳಿಗೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಭ್ರಷ್ಟಾಚಾರ ವಿರೋಧಿ ಮಾದರಿಗೆ ಅನುಗುಣವಾಗಿ ಇಂತಹ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ. ವಿಜಯ ಸಿಂಗ್ಲಾ ವಜಾ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಸಂಸದ ರಾಘವ್ ಚಡ್ಡಾ ತಮ್ಮ ಪಕ್ಷಕ್ಕೆ ಮಾತ್ರ ತಮ್ಮ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಾಮಾಣಿಕತೆ ಮತ್ತು ಧೈರ್ಯವಿದೆ ಎಂದಿದ್ದಾರೆ.
PublicNext
24/05/2022 04:00 pm