ಶಿಮ್ಲಾ: ಖಲಿಸ್ತಾನ್ ಪರವಾಗಿ ಟ್ವೀಟ್ ಮಾಡಿದ್ದ ಎಎಪಿ ನಾಯಕನನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಹಿಮಾಚಲ ಪ್ರದೇಶದ ಎಎಪಿ ಸಾಮಾಜಿಕ ಮಾಧ್ಯಮ ಉಸ್ತುವಾರಿ ಹರ್‌ಪ್ರೀತ್ ಸಿಂಗ್ ಬೇಡಿ ಅವರನ್ನು ಉಚ್ಚಾಟಿಸಲಾಗಿದೆ. ಹರ್‌ಪ್ರೀತ್ ಸಿಂಗ್ ಅವರು ಮಾಡಿರುವ ಸರಣಿ ಟ್ವೀಟ್‌ಗಳು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿವೆ. ಯಾವುದೇ ರೀತಿಯಲ್ಲಿ ಇದು ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಟ್ವೀಟ್ ಮೂಲಕ ಎಎಪಿ ಸ್ಪಷ್ಟಪಡಿಸಿದೆ.
ಹರ್‌ಪ್ರೀತ್ ಸಿಂಗ್ ಅವರು ಖಲಿಸ್ತಾನ ಪರ ಟ್ವೀಟ್ ಹಾಕಿದ್ದಾರೆ ಎಂದು ಬಿಜೆಪಿ ಭಾನುವಾರ ಆರೋಪಿಸಿತ್ತು.
PublicNext
03/05/2022 04:08 pm