ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಬೆಳಗಾವಿಯಲ್ಲಿ ನಿಕಟಪೂರ್ವ ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ ಒಂದಷ್ಟು ಸತ್ಯಾಂಶದ ಮೇಲೆ ಬೆಳಕು ಚೆಲ್ಲಿದ್ದಾರೆ.
2020ರಲ್ಲಿ ಹಿಂಡಲಗಾ ಗ್ರಾಮದ ಲಕ್ಷ್ಮಿದೇವಿ ಜಾತ್ರೆ ಇತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ನನ್ನ ಬಳಿ ಬಂದಿದ್ದರು. ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಲೇಟರ್ ನೀಡುವಂತೆ ಕೋರಿದ್ದರು. ಅವರ ಮನವಿಯಂತೆ ನಾನು ಲೆಟರ್ ಕೊಟ್ಟಿದ್ದೇನೆ. ಆದರೆ, ನಾನು ಕೊಟ್ಟ ಲೆಟರ್ ಮುಂದೇನಾಯ್ತು ಅನ್ನೋದು ನನಗೆ ಗೊತ್ತಿಲ್ಲ ಅಂತಲೇ ಆಶಾ ಐಹೊಳೆ ಹೇಳಿದ್ದಾರೆ.
ಈ ಸಂಬಂಧ RDPR ಇಲಾಖೆ ಅನುಮೋದನೆ ನೀಡಿರುವ ವಿಷಯ ನನಗೆ ಇವತ್ತಷ್ಟೇ ಗೊತ್ತಾಗಿದೆ. RDPR ಇಲಾಖೆಯಿಂದ ಬಂದಿರುವ ರಿಸೀವ್ ಕಾಪಿನೂ ನನಗೆ ಸಿಕ್ಕಿಲ್ಲ. ಆದರೆ ಗುತ್ತಿಗೆದಾರ ಸಂತೋಷ ಪಾಟೀಲ್‌ಗೆ ನಾನು ಮುಖಾಮುಖಿ ಎಂದೂ ಭೇಟಿಯಾಗಿಲ್ಲ. ಅವರ ಆತ್ಮಹತ್ಯೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಆದರೆ ಸಂತೋಷ ಆತ್ಮಹತ್ಯೆಯ ದುರಂತ ಮಾಡಿಕೊಳ್ಳಬಾರದಿತ್ತು ಅಂತಲೇ ಆಶಾ ಐಹೊಳೆ ವಿಷಾದ ವ್ಯಕ್ತಪಡಿಸಿದ್ದಾರೆ.
PublicNext
21/04/2022 12:49 pm