ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವರಿಗೆ ಸಂತೋಷ್ ಅವರನ್ನು ನಾನೇ ಎರಡು ಸಲ ಭೇಟಿಯಾಗಿದ್ದೆ: ಹಿಂಡಲಗಾ ಗ್ರಾ.ಪಂ ಅಧ್ಯಕ್ಷ

ಬೆಳಗಾವಿ: ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರನ್ನು ನಾನೇ ಎರಡು ಬಾರಿ ಸಚಿವ ಈಶ್ವರಪ್ಪ ಅವರಿಗೆ ಭೇಟಿ ಮಾಡಿಸಿದ್ದೇನೆ ಎಂದು ಹಿಂಡಲಗಾ ಗ್ರಾ.ಪಂ ಅಧ್ಯಕ್ಷ ನಾಗೇಶ್‌ ಮನ್ನೋಳಕರ್‌ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿಂಡಲಗಾ ಗ್ರಾ.ಪಂ ಅಧ್ಯಕ್ಷ ನಾಗೇಶ್‌, “ಈಶ್ವರಪ್ಪರನ್ನ ಸಂತೋಷ್‌ 2 ಬಾರಿ ಭೇಟಿ ಮಾಡಿದ್ದಾರೆ. 2 ಬಾರಿ ಬೆಂಗಳೂರಿಗೆ ತೆರಳಿ ಕೆಎಸ್‌ಇ ಭೇಟಿ ಮಾಡಿಸಿದ್ದೇನೆ. ಬೈಲಹೊಂಗಲದ ಸ್ವಾಮೀಜಿ ಜತೆ ನಾನು, ಸಂತೋಷ್‌ ಭೇಟಿ ಮಾಡಿದ್ದೇವೆ” ಎಂದಿದ್ದಾರೆ.

ಇನ್ನು “ಹಿಂಡಲಗಾದಲ್ಲಿ 100 ವರ್ಷಕ್ಕೊಮ್ಮೆ ಗ್ರಾಮದೇವಿ ಜಾತ್ರೆ ನಡೆಯುತ್ತೆ. ಹೀಗಾಗಿ 108 ಕಾಮಗಾರಿ ಮಾಡಬೇಕೆಂದು ಪಟ್ಟಿ ತಗೊಂಡು ಹೋಗಿದ್ದೆವು. ಅದಕ್ಕೆ ಈಶ್ವರಪ್ಪನವ್ರು ಆಯ್ತು ನೀವು ಕಾಮಗಾರಿ ಆರಂಭಿಸಿ ಎಂದು ಹೇಳಿದ್ದರು. ಇನ್ನು ಚೆನ್ನಾಗಿ ಕೆಲಸ ಮಾಡು ಅಂತಾ ಕೂಡ ಸಂತೋಷ್‌ ಪಾಟೀಲ್‌ಗೆ ಹೇಳಿದ್ದರು. ಸಚಿವರ ಸೂಚನೆ ಬಳಿಕವೇ 4 ಕೋಟಿ ವೆಚ್ಚದ ಕಾಮಗಾರಿ ನಡೆಸಿದ್ರು. 4 ಕೋಟಿ ವೆಚ್ಚದ 108 ಕಾಮಗಾರಿ ಮಾಡಿದ್ದರು. ನನ್ನ ಲೆಟರ್‌ಹೆಡ್‌ನಲ್ಲಿ ಸಹಿ ಮಾಡಿ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಗೆ ನಾನೂ ಪತ್ರವನ್ನ ಬರೆದಿದ್ದೆ” ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

13/04/2022 04:56 pm

Cinque Terre

36.75 K

Cinque Terre

4

ಸಂಬಂಧಿತ ಸುದ್ದಿ