ನವದೆಹಲಿ: ಶಾಸಕರೊಬ್ಬರ ವಿರುದ್ಧ ಸುದ್ದಿ ಮಾಡಿದ್ದರೆಂಬ ಕಾರಣಕ್ಕೆ ಪತ್ರಕರ್ತರನ್ನು ಠಾಣೆಗೆ ಕರೆದೊಯ್ದು ಬಟ್ಟೆ ಬಿಚ್ಚಿಸಲಾಗಿತ್ತು. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಏಪ್ರಿಲ್ 2 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು.
ಈ ಘಟನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶಾ ವ್ಯಕ್ತಪಡಿಸಿದ್ದಾರೆ. ಟೀಟ್ ಮೂಲಕ ಮಧ್ಯ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವನ್ನು ಲಾಕ್‌ಅಪ್‌ನಲ್ಲಿ ಕಳಚಲಾಗಿದೆ ಎಂದಿದ್ದಾರೆ.
'ಬಿಜೆಪಿ ನೇತೃತ್ವದ ಸರ್ಕಾರವು ಸತ್ಯಕ್ಕೆ ಬೆದರುತ್ತಿದೆ. ಸರ್ಕಾರದ ಮಡಿಲಲ್ಲಿ ಕುಳಿತು ಅದರ ಗುಣಗಾನ ಮಾಡಬೇಕು. ಇಲ್ಲವೇ ಜೈಲಿಗೆ ಹೋಗಬೇಕು. ಹೊಸ ಭಾರತದ ಸರ್ಕಾರವು ಸತ್ಯಕ್ಕೆ ಹೆದರುತ್ತಿದೆ ಎಂದು ರಾಹುಲ್ ಗಾಂಧಿ ಸಿಡಿದಿದ್ದಾರೆ.
PublicNext
08/04/2022 03:05 pm