ಬೆಂಗಳೂರು : ಬೆಂಗಳೂರಿನ ಜೆ.ಜೆ ನಗರದಲ್ಲಿ ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪೋಟಕ ಮಾಹಿತಿಯನ್ನು ನೀಡಿದ್ದರು. ಆದ್ರೆ ತಮ್ಮ ಹೇಳಿಕೆಯನ್ನು ವಾಪಸ್ ಪಡೆದ ಹೇಳಿಕೆಯೇ ತಪ್ಪಾಗಿದೆ. ಚಂದ್ರು ಕೊಲೆಗೆ ಬೈಕ್ ಗಲಾಟೆಯೇ ಕಾರಣ ಎಂಬುದಾಗಿ ಇದೀಗ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.
ಈ ಮುಂಚೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವ ಜ್ಞಾನೇಂದ್ರ, 'ಬೆಂಗಳೂರಿನ ಜೆ.ಜೆ.ನಗರದಲ್ಲಿ ದಲಿತ ಯುವಕ ಚಂದ್ರುವನ್ನು ಕೊಲೆ ಮಾಡಿದ್ದಾರೆ. ಚಂದ್ರು ಉರ್ದು ಮಾತನಾಡಿಲ್ಲ ಎಂದು ಕೊಲೆ ಮಾಡಲಾಗಿದೆ. ಕೊಲೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಚಂದ್ರು ಜೆ.ಜೆ ನಗರಕ್ಕೆ ಬೈಕ್ನಲ್ಲಿ ಸ್ನೇಹಿತ ಸೈಮನ್ನನ್ನು ಕೂರಿಸಿಕೊಂಡು ಹೋಗಿದ್ದಾರೆ. ಈ ವೇಳೆ ಅಪರಿಚಿತರ ಯುವಕರ ಬೈಕ್‌ಗೆ ಚಂದ್ರುವಿನ ಬೈಕ್ ತಗುಲಿದೆ. ಪರಿಣಾಮ, ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಚಂದ್ರು ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೊಲೆ ಮಾಡಲಾಗಿದೆ ಘಟನೆ ಸಂಬಂಧ ನಾಲ್ವರು ಅರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ' ಎಂದು ತಿಳಿಸಿದ್ದರು.
ಆದ್ರೇ ಇದೀಗ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದ ಗೃಹ ಸಚಿವ ಅರಗ ಜ್ಞಾನೇಂದ್ರ, ಕೊಲೆ ಬಗ್ಗೆ ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದಿರುವೆ. ಚಂದ್ರು ಕೊಲೆಗೆ ಬೈಕ್ ಗಲಾಟೆಯೇ ಕಾರಣ. ನನ್ನ ಹೇಳಿಕೆ ತಪ್ಪಾಗಿ, ತಕ್ಷಣದ ಮಾಹಿತಿ ಆಧಾರದ ಮೇಲೆ ಹೇಳಿದ್ದೇನೆ ಎಂಬುದಾಗಿ ತಮ್ಮ ಹೇಳಿಕೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.
PublicNext
06/04/2022 02:51 pm