ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿಎಂಸಿ ನಾಯಕನ ಹತ್ಯೆ-ಭುಗಿಲೆದ್ದ ಹಿಂಸಾಚಾರ-12 ಜನ ಸಜೀವ ದಹನ

ಪಶ್ಚಿಮ್ ಬಂಗಾಳ: ತೃಣ ಮೂಲ ಕಾಂಗ್ರೆಸ್ ಮುಖಂಡ ಬಹದ್ದೂರ್ ಶೇಕ್ ಹತ್ಯೆಯಾದ ಹಿನ್ನೆಲೆಯಲ್ಲಿಯೇ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆಯಾದ ಕೆಲವೇ ಗಂಟೆಯಲ್ಲಿ ಕಿಡಿಗೇಡಿಗಳೂ ಎಂಟು ಮನೆಗೆಳಿಗೆ ಬೆಂಕಿ ಇಟ್ಟಿದ್ದಾರೆ. ಮಕ್ಕಳು,ಮಹಿಳೆಯರು ಸೇರಿ ಹೆಚ್ಚು ಕಡಿಮೆ 12 ಜನ ಸಜೀವ ದಹನ ಆಗಿದ್ದಾರೆ.

ಮೊನ್ನೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಟಿಎಂಸಿ ಪಕ್ಷದ ಮುಖಂಡ ಶೇಖ್ ಹತ್ಯೆಯಾಗಿದೆ.ಇದರಿ ಪರಿಣಾಮ ಇಲ್ಲಿ ಹಿಂಸಾಚಾರ ತಾರಕಕ್ಕೇರಿದೆ.

ಜಿಲ್ಲೆಯ ಹಲವು ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಒಂದು ಮನೆಯಲ್ಲಂತೂ ಅಮ್ಮ, ಮಗಳು, ಸಹೋದರಿ, ಚಿಕ್ಕಮ್ಮ ಎಲ್ಲರೂ ಇದ್ದರು. ಬೆಂಕಿ ಹಚ್ಚಬೇಡಿ ಅಂತ ಬೇಡಿಕೊಂಡರೂ ಬಿಡದೆ ಮನೆ ಬೀಗ ಹಾಕಿದ್ದಾರೆ. ಬೆಂಕಿ ಹಚ್ಚಿದ್ದಾರೆ. ಇದರಿಂದ ಮನೆಯಲ್ಲಿದ್ದ ಅಷ್ಟೂ ಜನ ಸಜೀವ ದಹನ ಆಗಿದ್ದಾರೆ.

ಪತ್ರಕರ್ತ ಅಭಿಜೀತ್ ಮೊಜುಂದಾರ್ ಈ ವೀಡಿಯೋವನ್ನ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಜೀವ ದಹನವಾದ ಶವಗಳನ್ನ ಅಗ್ನಿಶಾಮಕ ದಳದ ಸಿಬ್ಬಂದಿ ಹೊರಗೆ ತೆಗೆದು ಹಾಕುತ್ತಿದ್ದಾರೆ. ಈ ದೃಶ್ಯ ನಿಜಕ್ಕೂ ಮನಕಲಕುವಂತಿದೆ.

Edited By : Manjunath H D
PublicNext

PublicNext

23/03/2022 01:00 pm

Cinque Terre

66.16 K

Cinque Terre

20

ಸಂಬಂಧಿತ ಸುದ್ದಿ