ಬೆಂಗಳೂರು: ಹಿಂದೂ ಯುವಕರನ್ನೇ ಗುರಿಯಾಗಿಸಿಕೊಂಡು ಪದೇ ಪದೇ ಕೆಲವು ಸಮಾಜಘಾತುಕ ಶಕ್ತಿಗಳು ದಾಳಿ ನಡೆಸುತ್ತಿವೆ. ಅಂತವರನ್ನು ಎನ್‌ಕೌಂಟರ್ ಮಾಡಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಹಿಂದೂ ಯುವಕರನ್ನು ಗುರಿಯಾಗಿಟ್ಟುಕೊಂಡು ಕೆಲವು ಸಮಾಜಘಾತುಕ ಶಕ್ತಿಗಳನ್ನು ಎನ್‌ಕೌಂಟರ್ ಮಾಡುವುದು ಸರಿಯಾದ ಕ್ರಮ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿಗಳನ್ನು ಬಂಸಿದರೆ ಸಾಲದು ಅವರನ್ನು ಎನ್‍ಕೌಂಟರ್ ಮಾಡಬೇಕು. ಅವರ ಕುಟುಂಬದ ಕಣ್ಣೀರನ್ನು ನೋಡಲು ಆಗುತ್ತಿಲ್ಲ. ಅವನಿಗೆ ಇಬ್ಬರು ಸಹೋದರಿಯರಿದ್ದಾರೆ. ಮೃತ ಹರ್ಷನ ದೇಹದಲ್ಲಿ ನಮ್ಮದೇ ಹಿಂದೂ ರಕ್ತ ಹರಿಯುತ್ತಿತ್ತು. ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ. ಘಟನೆಗೆ ಸಂಬಂಸಿದಂತೆ ನಾನು ಮುಸ್ಲಿಮರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಮೃದುಧೋರಣೆ ತೋರಿದ್ದೇವೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದರು.
PublicNext
22/02/2022 06:31 pm