ಮೀರತ್(ಉತ್ತರ ಪ್ರದೇಶ) ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆದಿದೆ. ಹೀಗಂತ ಸ್ವತಃ ಸಂಸದ ಓವೈಸಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಮೀರತ್ ನಗರದಲ್ಲಿ ಇಂದು (ಗುರುವಾರ) ಸಂಜೆ ಈ ಘಟನೆ ನಡೆದಿದ್ದು ಸಂಸದ ಓವೈಸಿ ಹಾಗೂ ಕಾರಿನಲ್ಲಿದ್ದ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. "ಐದು ಸುತ್ತು ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಫೈರಿಂಗ್ ಆದ ಪರಿಣಾಮ ಕಾರು ಪಂಕ್ಚರ್ ಆಗಿದೆ. ಬಳಿಕ ಇನ್ನೊಂದು ಕಾರಿನ ಮೂಲಕ ಅಲ್ಲಿಂದ ಪಾರಾಗಿದ್ದಾಗಿ ಓವೈಸಿ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಉತ್ತರ ಪ್ರದೇಶದ ಚುನಾವಣೆ ಕಾವು ಹೆಚ್ಚಾಗಿರುವ ಈ ದಿನಗಳಲ್ಲೇ ಘಟನೆ ನಡೆದಿದ್ದು ಹಲವು ಆಯಾಮದ ಚರ್ಚೆಗಳಿಗೆ ಕಾರಣವಾಗಿದೆ.
PublicNext
03/02/2022 07:22 pm