ಲಕ್ನೋ: ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಮೇಲೆ ಯುವಕರ ಗುಂಪೊಂದು ರಾಸಾಯನಿಕ ಎರಚಲು ಪ್ರಯತ್ನಿದ ಘಟನೆ ಉತ್ತರ ಪ್ರದೇಶದ ಲಕ್ನೋ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದಿದೆ.
ಲಕ್ನೋದ ಕಾಂಗ್ರೆಸ್ ಕಚೇರಿಯಲ್ಲಿ ಕನ್ಹಯ್ಯಾ ಕುಮಾರ್ ಮೇಲೆ ಈ ಮಸಿ ಎರಚಲಾಗಿದೆ ಎಂದು ಹೇಳಲಾಗುತ್ತಿದೆ. ಮಸಿ ಎಂದು ಎಲ್ಲರನ್ನೂ ನಂಬಿಸಲಾಗುತ್ತದೆ. ಆದರೆ ಅದು ಒಂದು ರೀತಿಯ ಆಸಿಡ್ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕರು, 'ಅದು ಇಂಕ್ ಅಲ್ಲ, ಒಂದು ರೀತಿಯ ಆಸಿಡ್' ಎಂದು ಆರೋಪಿಸಿದ್ದಾರೆ. ಆರೋಪಿಗಳು ಕನ್ಹಯ್ಯಾ ಕುಮಾರ್ ಅವರ ಮೇಲೆ ಆಸಿಡ್ ಎಸೆಯಲು ಪ್ರಯತ್ನಿಸಿದರು. ಆದರೆ ಅದು ವಿಫಲವಾಯಿತು. ಆ ಆಸಿಡ್ನ ಕೆಲವು ಹನಿಗಳು ಹತ್ತಿರದಲ್ಲಿ ನಿಂತಿದ್ದ 3ರಿಂದ 4 ಯುವಕರ ಮೇಲೆ ಬಿದ್ದವು. ಪ್ರಸ್ತುತ, ಆರೋಪಿಗಳ ಬಗ್ಗೆ ಯಾರೂ ಏನನ್ನೂ ಹೇಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ದೂರಿದ್ದಾರೆ.
PublicNext
01/02/2022 08:42 pm