ಕೊಪ್ಪಳ: ಇತ್ತಿಚೆಗೆ ರಾಜಕಾರಿಗಳು ಮತ್ತು ಅಧಿಕಾರಿಗಳ ಮಧ್ಯೆ ಸಾಕಷ್ಟು ಗಲಾಟೆಗಳು ನಡೆದಿರುವ ಬಗ್ಗೆ ವರದಿಗಳಾಗಿದೆ. ಸದ್ಯ ಇಲ್ಲೊಂದು ಕೇಸ್ ನಲ್ಲಿ ಕನಕಗಿರಿ ಶಾಸಕ ಬಸವರಾಜ ದಡೆಸುಗೂರ ಮತ್ತು ಕನಕಗಿರಿ ಸಿಡಿಪಿಒ ಮಹಿಳಾ ಅಧಿಕಾರಿ ಇಬ್ಬರ ನಡುವೆ ಲವ್ವಿ,ಡವ್ವಿ ನಡೆದ್ದಿತ್ತು ಎನ್ನುವ ಸುದ್ದಿ ಭಾರೀ ಸಂಚಲನ ಸೃಷ್ಟಿಸಿದೆ.
ಸದ್ಯ ಇವರ ಸಂಭಾಷಣೆಯ ಆಡಿಯೋವೊಂದು ವೈರಲ್ ಆಗಿದೆ. ಸುದೀರ್ಘ ಸಂಭಾಷಣೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಮಹಿಳಾ ಅಧಿಕಾರಿ ಬಳಿಕ ಕಚೇರಿಯ ಬಾಗಿಲು ಮುಚ್ಚಿಕೊಂಡು ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ.
ಈ ವೇಳೆ ಸಿಬ್ಬಂದಿ ಬಾಗಿಲನ್ನು ಮುರಿದು ಅವರನ್ನು ರಕ್ಷಿಸಿದ್ದಾರೆ ಅಷ್ಟಕ್ಕೂ ಫೋನ್ ಸಂಭಾಷಣೆಯಲ್ಲಿ ನಡೆದ ಇವರಿಬ್ಬರ ಮಾತುಕತೆ ಏನು ಎನ್ನುವುದನ್ನು ನೀವೆ ಕೇಳಿ.
PublicNext
04/01/2022 02:38 pm