ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೇದಿಕೆ ಮೇಲೆಯೇ ಕುಸ್ತಿಪಟುವಿಗೆ ಕಪಾಳಮೋಕ್ಷ…

ರಾಂಚಿ: ಉತ್ತರ ಪ್ರದೇಶದ ಕುಸ್ತಿಪಟುವಿಗೆ ವೇದಿಕೆ ಮೇಲೆಯೇ ಬಿಜೆಪಿ ಎಂಪಿ ಕಪಾಳಮೋಕ್ಷ ಮಾಡಿರುವ ಘಟನೆ ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ನಡೆದಿದೆ. ರಾಂಚಿಯ ಮೆಗಾ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ನಡೆಯುತ್ತಿತ್ತು. ಈ ವೇಳೆ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಉತ್ತರ ಪ್ರದೇಶದ ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದ್ದಾರೆ. ವೇದಿಕೆಯ ಮೇಲೆ ಈ ರೀತಿ ಘಟನೆ ನಡೆದಿರೋದ್ರಿಂದ ಸ್ಪರ್ಧೆಯ ವೇಳೆ ಕೆಲಕಾಲ ಗದ್ದಲ ಉಂಟಾಯಿತು. ಉತ್ತರಪ್ರದೇಶದ ಕುಸ್ತಿಪಟು 15 ವರ್ಷಕ್ಕಿಂತ ಮೇಲ್ಪಟ್ಟವನಾಗಿದ್ದು ಆಡಲು ಅವಕಾಶ ಕೊಡಬೇಕೆಂದು ವಾದ ಮಾಡ್ತಿದ್ದ. ಇದ್ರಿಂದ ಕುಪಿತಗೊಂಡ ಬ್ರಿಜ್ ಭೂಷಣ್ ವೇದಿಕೆ ಮೇಲೆಯೇ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಲ್ಲಿದ್ದ ಆಟಗಾರರು ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟಿಸಿದ್ರು. ಆಗ ಜಾರ್ಖಂಡ್ ಕುಸ್ತಿ ಸಂಸ್ಥೆಯ ಅಧ್ಯಕ್ಷ ಭೋಲಾನಾಥ್ ಸಿಂಗ್ ಮತ್ತು ಇತರರು ಮಧ್ಯಪ್ರವೇಶಿಸಿ ಎಲ್ಲರನ್ನೂ ಸಮಾಧಾನಪಡಿಸಿದ್ರು..

Edited By : Manjunath H D
PublicNext

PublicNext

18/12/2021 12:28 pm

Cinque Terre

47.66 K

Cinque Terre

7

ಸಂಬಂಧಿತ ಸುದ್ದಿ