ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರು ಎಂಜಲು ಕಾಸು ತಿಂದು ಬದುಕ್ತಿದ್ದಾರೆ: ಗೃಹ ಸಚಿವರ ವಿಡಿಯೋ ವೈರಲ್

ಚಿಕ್ಕಮಗಳೂರು: 'ಅಲ್ಲಿ ಯಾರೋ ಕೈಯಲ್ಲಿ ತಲವಾರು ಹಿಡಿದುಕೊಂಡು ರಾಜಾರೋಷವಾಗಿ ಓಡಾಡ್ತಾರೆ. ನಮ್ಮ ಪೊಲೀಸಿನವರು ಕೆಟ್ಟು ಹಾಳಾಗಿದ್ದಾರೆ. ನಿಮಗೆ ಕೈ ತುಂಬ ಸಂಬಳ ಸಿಗುತ್ತಿದೆ. ಆದರೂ ಎಂಜಲು ಕಾಸು ತಿಂದು ಬದುಕುತ್ತಿದ್ದೀರಿ' ಎಂದು ಗೃಹ ಸಚಿವರು ಮಾತಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದನ ಸಾಗಣೆಗೆ ಸಂಬಂಧಪಟ್ಟಂಥೆ ಚಿಕ್ಕಮಗಳೂರಿನ ಪೊಲೀಸರು ಕೆಲ ದಿನಗಳ ಹಿಂದೆ ಬಂಧಿಸಿದ್ದ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಲಾಗಿತ್ತು, ಇದಕ್ಕೆ ಸಂಬಂಧಪಟ್ಟಂತೆ ತಮ್ಮನ್ನು ಭೇಟಿಯಾಗಿದ್ದವರ ಮನವಿ ಆಲಿಸಿದ ಗೃಹ ಸಚಿವರು ಸಂಬಂಧಪಟ್ಟ ಪೊಲೀಸರಿಗೆ ಕರೆ ಮಾಡಿ ಸಿಟ್ಟಾಗಿ ಮಾತನಾಡಿದ್ದಾರೆ. ಅದು ಈಗ ವಿವಾದಕ್ಕೆ ಕಾರಣವಾಗಿದೆ. ನಿಮಗೆ ಯೋಗ್ಯತೆ ಇಲ್ಲದೇ ಇದ್ದರೇ ಯೂನಿಫಾರ್ಮ್ ಬಿಚ್ಚಿಟ್ಟು ಮನೆಯಲ್ಲಿ ಸಾಯಲಿ ಅಂತ ಹೇಳಿರುವುದನ್ನು ವೈರಲ್‌ ವಿಡಿಯೋದಲ್ಲಿ ಕಾಣಬಹುದಾಗಿದೆ.

Edited By : Nagaraj Tulugeri
PublicNext

PublicNext

03/12/2021 01:07 pm

Cinque Terre

74.3 K

Cinque Terre

27

ಸಂಬಂಧಿತ ಸುದ್ದಿ