ಕಾರವಾರ: ಮುರ್ಡೇಶ್ವರ ದೇವಸ್ಥಾನಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇವತ್ತು ಹೇಳಿದ್ದಾರೆ.
ಮುರ್ಡೇಶ್ವರದಲ್ಲಿರೋ ಬೃಹತ್ ಈಶ್ವರನ ಧ್ವಂಸಗೊಳಿಸಿ ಅಲ್ಲಿ ಐಸಿಸ್ ಧ್ವಜ ನೆಟ್ಟ ಪೋಟೋ ಸಿಕ್ಕಾಪಟ್ಟೆ ಸಂಚಲನ ಹುಟ್ಟುಹಾಕಿದೆ. ಇದರ ಹಿನ್ನೆಲೆಯಲ್ಲಿಯೇ ಸೋಮವಾರದಿಂದಲೇ ದೇವಸ್ಥಾನಕ್ಕೆ ಭದ್ರತೆ ಒದಗಿಸಲಾಗಿದೆ.
ಪೋಟೋ ಹರಿಬಿಟ್ಟವರ ತನಿಖೆಗೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನೂ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಭದ್ರತೆಗೆ ಕೇಂದ್ರದ ನೆರವು ಕೇಳಿದ್ದೇವೆ. ಕರಾವಳಿ ಕಾವಲು ಪಡೆಗೆ 30 ಸುಸಜ್ಜಿತ ಬೋಟ್‌ಗಳ ಬೇಡಿಕೆಯನ್ನೂ ಇಟ್ಟಿದ್ದೇವೆ.ದೇಶದ್ರೋಹದ ಚಟುವಟಿಕೆಯಲ್ಲಿ ಕರಾವಳಿ ಭಾಗದ ಹಲವು ಯುವಕರು ಪಾಲ್ಗೊಳ್ಳುತ್ತಿರೋ ಶಂಕೆ ಇದೆ ಅಂತಲೂ ತಿಳಿಸಿದ್ದಾರೆ ಆರಗ ಜ್ಞಾನೇಂದ್ರ.
PublicNext
23/11/2021 10:19 pm