ತಿರುವನಂತಪುರಂ: ಕೇರಳದ ಮಂಬರಂ ಪಟ್ಟಣದಲ್ಲಿ ಹಾಡಹಗಲೇ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸಂಜೀತ್ (27) ಎಂಬುವವರೇ ಕೊಲೆಯಾದ ವ್ಯಕ್ತಿ. ಇಂದು ಸೋಮವಾರ ಬೆಳಿಗ್ಗೆ ಪತ್ನಿಯನ್ನು ಬೈಕ್ ಮೇಲೆ ಕೆಲಸದ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ವೇಳೆ ಬೈಕ್‌ಗೆ ಅಡ್ಡಗಟ್ಟಿದ ದುಷ್ಕರ್ಮಿಗಳು ಸಂಜೀತ್ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಹಲ್ಲೆ ಮಾಡಿ ಕೊಲೆಗೈದಿದ್ದಾರೆ.
ಸಂಜೀತ್ ಅವರ ಪತ್ನಿ ಕಣ್ಣೆದುರೇ ಈ ಕೊಲೆ ನಡೆದಿದ್ದು, ಈ ಕೃತ್ಯದಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಕಾರ್ಯಕರ್ತರ ಪಾತ್ರ ಇದೆ ಎಂದು ಬಿಜೆಪಿ ಶಂಕಿಸಿದೆ. ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಇನ್ನೊಂದು ವಾಹನದಿಂದ ನುಗ್ಗಿ ಡಿಕ್ಕಿಪಡಿಸಿದ್ದಾರೆ. ನಂತರ ಸಂಜೀತ್ ಕೆಳಗೆ ಬಿದ್ದಾಗ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದೆ ಎಂದು ಕೇರಳ ಬಿಜೆಪಿ ಆರೋಪಿಸಿದೆ.
PublicNext
15/11/2021 10:55 pm