ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ಪಾಲಮ್ಮಳ ಮೇಲೆ ಪೆಟ್ರೋಲ್ ಸುರಿದು ಬೆಂಕಿಗೆ ಬಲಿಯಾದ
ಪಾಲಮ್ಮನ ಮನೆಗೆ ಇಂದು ಸುರಪುರ ಶಾಸಕ ರಾಜುಗೌಡ ಅವರು, ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 50 ಸಾವಿರ ರೂಪಾಯಿ ನೀಡಿದರು.
ಇದೆ ವೇಳೆ ಮಾತನಾಡಿದ ಶಾಸಕರು, ಪೊಲೀಸರು ಈಗಾಗಲೇ ಆರೋಪಿ ಗಂಗಪ್ಪ ನನ್ನ ಬಂಧಿಸಿದ್ದು, ಇನ್ನುಳಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಅಲ್ಲದೇ ನೊಂದ ಕುಟುಂಬದವರ ಕಂಪ್ಲೇಂಟ್ ಪ್ರಕಾರ ಎಷ್ಟು ಜನ ಕೃತ್ಯದಲ್ಲಿ ಇದ್ದಾರೆ ಎಲ್ಲರನ್ನ ಕಂಬಿ ಹಿಂದೆ ತಳ್ಳಿ ಕಠಿಣ ಶಿಕ್ಷೆ ನೀಡಬೇಕು ಎಂದು ಅಲ್ಲೇ ಕುಳಿತಿದ್ದ ಸುರಪುರ , ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ್ ಹೊಗಿಬಂಡಿ ಅವರಿಗೆ ಸೂಚಿಸಿದರು.
ಅಲ್ಲದೇ ಈ ಘಟನೆಯಿಂದಾಗಿ ನಾವು ತಲೆತಗ್ಗಿಸುವಂತಾಗಿದೆ. ಕೂಡಲೇ ಈ ಪ್ರಕರಣದ ಆರೋಪಿಗಳನ್ನ ಹುಡುಕಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
-----
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
07/10/2021 04:23 pm