ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಸಂಸದನಿಗೆ ಅಟ್ಟಾಡಿಸಿ ಥಳಿಸಿದ ಸಾರ್ವಜನಿಕರು

ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾರಿಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರು ಥಳಿಸಿದ್ದಾರೆ. ಉತ್ತರ ಪ್ರದೇಶದ ಪ್ರತಾಪ್​ ಗಢ್ ​​ನ ಸಂಗಮ್ ಲಾಲ್ ಅವರು ತಮ್ಮ ಕ್ಷೇತ್ರ ಪ್ರತಾಪ್ ಗಢ್ ನ ಸಂಗಿಪುರ್ ಬ್ಲಾಕ್ ನಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ಈ ಘಟನೆ ನಡೆದಿದೆ.

ಏಕಾಏಕಿ ಸಾರ್ವಜನಿಕರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಹೊಡೆದಿದೆ. ಜನರಿಂದ ತಪ್ಪಿಸಿಕೊಂಡು ವಾಹನ ಹತ್ತಿದರೂ ಬಿಡದೆ, ವಾಹನಕ್ಕೇ ಕಲ್ಲು ಹೊಡೆದಿದ್ದಾರೆ. ಈ ದಾಳಿ ನಡೆಯಲು ಮುಖ್ಯ ಕಾರಣ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಮತ್ತು ಅವರ ಪುತ್ರಿ, ಜನಪ್ರತಿನಿಧಿ ಆರಾಧನಾ ಮಿಶ್ರಾ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಆರೋಗ್ಯ ಶಿಬಿರದಲ್ಲಿ ನಡೆದ ಗಲಾಟೆಯಲ್ಲಿ ಹಲವು ಬಿಜೆಪಿ ಕಾರ್ಯಕರ್ತರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರತಾಪ್ಗಢ್ ಬಿಜೆಪಿ ಸಂಸದನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ವಾರಾಣಸಿ ಹೆದ್ದಾರಿಯಲ್ಲಿ ಧರಣಿ ನಡೆಸಿ, ಕ್ರಮಕ್ಕೆ ಆಗ್ರಹಿಸಿದ್ದರು.

ಇದಾದ ನಂತರ ಪ್ರತಾಪ್ ಗಡ್ ನ ಲಾಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಮತ್ತು ಅವರ ಪುತ್ರಿ ಆರಾಧನಾ ಮಿಶ್ರ ಮತ್ತು ಅವರ 27 ಬೆಂಬಲಿಗರ ವಿರುದ್ಧ ಹತ್ಯೆ ಯತ್ನ ಪ್ರಕರಣದಡಿ ಎಫ್ ಐಆರ್ ದಾಖಲಾಗಿದೆ. ಎಫ್ ಐಆರ್ ದಾಖಲಾಗುತ್ತಿದ್ದಂತೆ ಬಿಜೆಪಿಗರು ಪ್ರತಿಭಟನೆ ಕೈಬಿಟ್ಟಿದ್ದಾರೆ.

Edited By : Nirmala Aralikatti
PublicNext

PublicNext

26/09/2021 05:50 pm

Cinque Terre

118.3 K

Cinque Terre

19

ಸಂಬಂಧಿತ ಸುದ್ದಿ