ಚಂಡೀಗಢ: ಪಂಜಾಬ್‌ನ ಕಾಂಗ್ರೆಸ್ ಸರ್ಕಾರದಲ್ಲಿ ಅನಿರೀಕ್ಷಿತ ತಿರುವು ಪಡೆದು ಸಿಎಂ ಬದಲಾವಣೆ ಆಗಿದೆ. ಇಂದು ನೂತನ ಸಿಎಂ ಆಗಿ ಚರಣ್‌ಜಿತ್ ಸಿಂಗ್ ಛನ್ನಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆರಂಭದಲ್ಲೇ ವಿಘ್ನ ಎನ್ನುವಂತೆ ಚರಣ್‌ಜಿತ್ ಮೇಲೆ 2018ರಲ್ಲಿ ಕೇಳಿ ಬಂದಿದ್ದ ಮೀಟೂ ಆರೋಪ ಮತ್ತೆ ಮುನ್ನಲೆಗೆ ಬಂದಿದೆ.
ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಚರಣ್‍ಜಿತ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದಲ್ಲದೆ ಅಂದಿನ ಸಿಎಂ ಅಮರೀಂದರ್ ಸಿಂಗ್ ಅವರಲ್ಲಿ ದೂರು ಕೂಡ ನೀಡಿದ್ದರು. ಇದೀಗ ಚರಣ್‍ಜಿತ್ ಸಿಂಗ್ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಿಸುತ್ತಿದ್ದಂತೆ ಅವರ ಮೇಲಿದ್ದ ಮೀಟೂ ಆರೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹರಿಬಿಡಲಾಗುತ್ತಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ‘ವೆಲ್ ಡನ್ ರಾಹುಲ್’ ಎಂದು ಚರಣ್‍ಜಿತ್ ಛನ್ನಿ ಆಯ್ಕೆಗೆ ವ್ಯಂಗ್ಯವಾಡಿದ್ದಾರೆ.
PublicNext
20/09/2021 07:48 am