ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಷಿಯಲ್ ಮಿಡಿಯಾದಲ್ಲಿ ನಕಲಿ ವಿಡಿಯೋ : ಸೈಬರ್ ಕ್ರೈಂಗೆ ಸದಾನಂದಗೌಡರ ದೂರು

ಬೆಂಗಳೂರು : ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ ಅವರನ್ನು ಹೋಲುವ ವ್ಯಕ್ತಿಯ ಆಶ್ಲೀಲ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿದೆ.

ಡಿ.ವಿ ಸದಾನಂದಗೌಡರಂತೆ ಕಾಣುವ ವ್ಯಕ್ತಿ ವಿಡಿಯೊ ಕಾಲ್ ಮೂಲಕ ಮಹಿಳೆಯೊಬ್ಬಳ ಜೊತೆ ಅತ್ಯಂತ ಅಸಭ್ಯ ಹಾಗೂ ಅಶ್ಲೀಲವಾಗಿ ಮಾತನಾಡಿದ್ದು ವೈರಲ್ ಆಗಿದೆ. ಮುಖ ಹೋಲಿಕೆ ಹಾಗೂ ಮಾತನಾಡುವ ಶೈಲಿ ಸದಾನಂದಗೌಡರಂತೆ ಕಾಣುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.

ಯಾವ ಕಾರಣಕ್ಕಾಗಿ, ಯಾರೂ ಈ ರೀತಿ ಗೌಡರನ್ನು ಹೋಲುವ ನಕಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂಬುದು ಬೆಳಕಿಗೆ ಬರಬೇಕಾಗಿದೆ.

ಆದರೆ ತಮ್ಮ ಟ್ವೀಟ್ ಮೂಲಕ ಡಿ.ವಿ ಸದಾನಂದಗೌಡರು ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನ ತೇಜೋವಧೆ ಮಾಡುವ ದುರುದ್ದೇಶದಿಂದ ನಕಲಿ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿವೆ, ಅದರಲ್ಲಿರುವ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟಪಡಿಸುತ್ತೇನೆ.

ಈ ಬಗ್ಗೆ ಈಗಾಗಲೇ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ. ಇದನ್ನು ಸೃಷ್ಟಿಸಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂಬ ನಂಬಿಕೆ ನನಗಿದೆ. ನ್ಯಾಯಾಲಯದ ಮಧ್ಯಂತರ ಆಜ್ಞೆ ಅನ್ವಯ ಯಾರಾದರೂ ಈ ವಿಡಿಯೋವನ್ನು ಅಪ್ ಲೋಡ್ ಮಾಡಿದಲ್ಲಿ ಅಥವಾ ಫಾರ್ವರ್ಡ್ ಮಾಡಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

Edited By : Manjunath H D
PublicNext

PublicNext

19/09/2021 08:14 pm

Cinque Terre

213.09 K

Cinque Terre

15

ಸಂಬಂಧಿತ ಸುದ್ದಿ