ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕನಿಗೆ ಸಾಲು ಸಾಲು ಆಘಾತ: ಕಳೆದ ವರ್ಷ ತಂದೆ, ಏಪ್ರಿಲ್​ನಲ್ಲಿ ಪತ್ನಿ, ಈಗ ಒಬ್ಬನೇ ಪುತ್ರನೊಂದಿಗೆ ಭಾವಿ ಸೊಸೆಯೂ ಸಾವು

ಬೆಂಗಳೂರು: ಸಾಲು ಸಾಲು ಅಪಘಾತಗಳಿಂದಾಗಿ ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್​ ಅವರು ತಂದೆ, ಪತ್ನಿ ಹಾಗೂ ಈಗ ಒಬ್ಬನೇ ಪುತ್ರ, ಭಾವಿ ಸೊಸೆಯನ್ನು ಕಳೆದುಕೊಂಡಿದ್ದಾರೆ.

ಹೌದು. ಒಂದು ವರ್ಷದ ಹಿಂದಷ್ಟೇ ​ಶಾಸಕ ವೈ. ಪ್ರಕಾಶ್ ಅವರು ರಸ್ತೆ ಅಪಘಾತದಲ್ಲಿ ತಂದೆ ಯಳಪ್ಪ ಅವರನ್ನು ಕಳೆದುಕೊಂಡಿದ್ದರು. ಬಳಿಕ ಕಳೆದ ತಮಿಳುನಾಡು ಚುನಾವಣೆ ಸಂದರ್ಭದಲ್ಲಿ ಜೀವನದ ಉದ್ದಕ್ಕೂ ಜತೆಯಾಗಿದ್ದ ಪತ್ನಿ ಶಿವಮ್ಮ ಅವರನ್ನು ಕಳೆದುಕೊಂಡಿದ್ದರು. ಅನಾರೋಗ್ಯದಿಂದ ಏಪ್ರಿಲ್‌ನಲ್ಲಿ ಶಿವಮ್ಮ ಮೃತಪಟ್ಟಿದ್ದರು. ಇದೀಗ ಜೀವನದಲ್ಲಿ ಆಸರೆಯಾಗಿದ್ದ ಒಬ್ಬನೇ ಪುತ್ರ ಕರುಣಾಸಾಗರ್ ಕೂಡ ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಅಸುನೀಗಿದ್ದಾನೆ.

ವೈ. ಪ್ರಕಾಶ್ ಅವರು ಇಂಗ್ಲೆಂಡ್​ನಲ್ಲಿ ವ್ಯಾಸಾಂಗ ಮಾಡಿದ್ದ ಕರುಣಾಸಾಗರ್​ಗೆ ಪ್ಯಾಕೇಜಿಂಗ್ ಇಂಡಸ್ಟ್ರಿ ನಿರ್ಮಾಣ ಮಾಡಿಕೊಟ್ಟಿದ್ದರು. ಬ್ಯಾಳಗೊಂಡಹಳ್ಳಿಯಲ್ಲಿ ಕಂಪನಿ ನಡೆಸುತ್ತಿದ್ದ. ಕರುಣಾಸಾಗರ್​ ಹಾಗೂ ಮೃತ ಬಿಂದು ಇಬ್ಬರು ಪ್ರೀತಿ ಮಾಡುತ್ತಿದ್ದರು. ಸದ್ಯದಲ್ಲೇ ಇಬ್ಬರಿಗೂ ಮದುವೆ ಮಾಡಲು ಕರುಣಾಸಾಗರ್ ಕುಟುಂಬಸ್ಥರು ಮುಂದಾಗಿತ್ತು. ಆದರೆ ವಿಧಿಯಾಟದಲ್ಲಿ ವೈ. ಪ್ರಕಾಶ್​ ಅವರಿಗೆ ಪುತ್ರ ವಿಯೋಗ ಆಗಿದೆ. ಪುತ್ರನ ಜತೆಗೆ ಭಾವಿ ಸೊಸೆಯು ಕೂಡ ಕುಟುಂಬದಿಂದ ದೂರಾಗಿದ್ದು, ಎಲ್ಲರನ್ನೂ ಕಳೆದುಕೊಂಡಿರುವ ವೈ. ಪ್ರಕಾಶ್​ ಇಂದು ಅನಾಥರಾಗಿದ್ದಾರೆ.

Edited By : Vijay Kumar
PublicNext

PublicNext

31/08/2021 05:14 pm

Cinque Terre

50.06 K

Cinque Terre

7

ಸಂಬಂಧಿತ ಸುದ್ದಿ