ಗದಗ: ಮುದ್ರಣಕಾಶಿ ಎಂದೇ ಖ್ಯಾತಿ ಪಡೆದ ಗದಗ ಜಿಲ್ಲೆಯಲ್ಲಿ ರಾಷ್ಟ್ರೀಯ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆಯೊಂದು ಜಿಲ್ಲೆಯ ಗೋವನಾಳ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಶಾಸಕ ರಾಮಣ್ಣ ಲಮಾಣಿ ನೇತೃತ್ವದಲ್ಲಿಯೇ ರಾಷ್ಟ್ರಧ್ವಜಕ್ಕೆ ಅಗೌರವ ಮಾಡಲಾಗಿದ್ದು, ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಆಗಮನದ ಹಿನ್ನೆಲೆಯಲ್ಲಿ
ಸಚಿವರ ಸ್ವಾಗತಕ್ಕೆ ರಾಷ್ಟ್ರೀಯ ಧ್ವಜದ ರಂಗೋಲಿಯನ್ನು ಹಾಕಲಾಗಿತ್ತು. ಆದರೆ ಬಿಜೆಪಿ ಕಾರ್ಯಕರ್ತರು ಯಾವುದನ್ನು ಲೆಕ್ಕಿಸದೇ ರಾಷ್ಟ್ರಧ್ವಜದ ರಂಗೋಲಿಯ ಮೇಲೆ ಚಪ್ಪಲಿ ಹಾಕಿಕೊಂಡು ಓಡಾಡುವ ಮೂಲಕ ಅಪಮಾನ ಮಾಡಿದ್ದಾರೆ.
ಇನ್ನೂ ಕೋವಿಡ್ ನಿಯಮ ಗಾಳಿಗೆ ತೂರಿದ ಶಾಸಕ ರಾಮಣ್ಣ ಲಮಾಣಿ ಜನರನ್ನು ಗುಂಪು ಕೂಡಿಸಿಕೊಂಡಿದ್ದಾರೆ. ಅಲ್ಲದೇ ಶಾಸಕರ ಹಾಗೂ ಬಿಜೆಪಿ ಕಾರ್ಯಕರ್ತರ ಬೇಜವಾವ್ದಾರಿತನಕ್ಕೆ ದೇಶಪ್ರೇಮಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
19/08/2021 09:19 pm