ಲಿಂಗಸುಗೂರು: ಗ್ರಾ.ಪಂ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಭ್ಯರ್ಥಿಗಳು, ಜಯ ಸಾಧಿಸಿದ್ದ ಸದಸ್ಯೆಯ ಪುತ್ರನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಈ ಘಟನೆ ಲಿಂಗಸುಗೂರು ತಾಲ್ಲೂಕಿನ ಗಡದನಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ನೂತನವಾಗಿ ಆಯ್ಕೆಯಾಗಿದ್ದ ಹಣಮಂತಮ್ಮ ಅವರ ಪುತ್ರ ಶರಣಬಸವ (35) ಕೊಲೆಗೀಡಾಗಿದ್ದಾರೆ. ಹಣಮಂತಮ್ಮ ಅವರು ನೀಡಿದ ದೂರು ಆಧರಿಸಿ ಗಡದನಾಳ ಗ್ರಾಮದ ಜಗದೀಶ ಶರಣಪ್ಪ, ಯಮಬೂರ ಅಮರಪ್ಪ, ಮಹಾಂಕಾಳೆಪ್ಪ ಅಮರಪ್ಪ, ಬಸವರಾಜ ಶರಣಪ್ಪ, ಹನುಮಂತಿ ಅಮರಪ್ಪ, ದುರುಗಪ್ಪ ನಿಂಗಪ್ಪ, ಶರಣಬಸವ ಮಾನಪ್ಪ, ಕೆಂಚವ್ವ ಮಾನಪ್ಪ, ಯಲ್ಲವ್ವ ನಿಂಗಪ್ಪ, ನಿಂಗಪ್ಪ ಅಮರಪ್ಪ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
16/02/2021 07:57 pm