ನವದೆಹಲಿ: ಆನ್ ಲೈನ್ ವೆಬ್ ಸೈಟ್ ಓಎಲ್ಎಕ್ಸ್ ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಮಾರಲು ಮುಂದಾಗಿದ್ದ ದೆಹಲಿ ಸಿಎಂ ಕೇಜ್ರಿವಾಲ್ ಅವರ ಪುತ್ರಿಗೆ ಆ ಸೋಫಾ ಕೊಳ್ಳುವುದಾಗಿ ನಂಬಿಸಿ ಆಕೆಯ ಬ್ಯಾಂಕ್ ಖಾತೆಗೆ ಸ್ವಲ್ಪ ಹಣವನ್ನು ಹಾಕಿದ್ದ. ನಂತರ ಆಕೆಗೆ ಬಾರ್ ಕೋಡ್ ಕಳುಹಿಸಿ, ಅದನ್ನು ಸ್ಕ್ಯಾನ್ ಮಾಡಲು ಹೇಳಿ. ಆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಆಕೆಯ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿತ್ತು. ಈ ಮೂಲಕ ಸೋಫಾ ಖರೀದಿಸುವ ನೆಪದಲ್ಲಿ ಈ ನಾಲ್ವರು ಅರವಿಂದ್ ಕೇಜ್ರಿವಾಲ್ ಮಗಳಿಗೆ 34,000 ರೂ. ಪಂಗನಾಮ ಹಾಕಿದ್ದರು.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಿನೆ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ನುಹ್ ನಿವಾಸಿ ಸಾಜಿದ್ (26), ಮಥುರಾ ಮೂಲದ ಕಪಿಲ್(18) ಮತ್ತು ಮನ್ವಿಂದರ್ ಸಿಂಗ್ (25) ಅವರನ್ನು ಭಾರತಪುರ-ಮಥುರಾ ಗಡಿಯಲ್ಲಿ ತಾಂತ್ರಿಕ ಕಣ್ಗಾವಲು ಸಹಾಯದಿಂದ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಾರಿಸ್(25) ಎಂದು ಗುರುತಿಸಲಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
PublicNext
15/02/2021 04:55 pm