ಬೆಳಗಾವಿ: ಮೋಸದ ಕೇಸಿನಲ್ಲಿ ವಿಚಾರಣೆ ಎದುರಿಸುತ್ತಿರುವ ಯುವರಾಜ್ ಒಮ್ಮೆ ನನ್ನನ್ನು ಭೇಟಿಯಾಗಿದ್ದು ನಿಜ. ಬೆಂಗಳೂರಿಗೆ ಹೋದಾಗ ನನ್ನ ಬಳಿ ಸಾವಿರ ಜನ ಬರ್ತಾರೆ ಹೋಗ್ತಾರೆ. ಬಂದವರು ಹೂಮಾಲೆ ಹಾಕ್ತಾರೆ. ಹೀಗೆ ಬಂದವರಿಗೆ ಬರಬೇಡ ಎನ್ನಲಾಗದು. ಇದೇ ರೀತಿ ಯುವರಾಜ್ ಕೂಡ ಬಂದಿದ್ದ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸವದಿ, ಯುವರಾಜ್ ಅನೇಕ ಕಡೆ ನಾನು ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ, ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿದ್ದೇನೆ ಅಂತ ಹೇಳಿಕೊಂಡಿದ್ದನು. ಆದರೀಗ ಅವನು ನಕಲಿ ಎಂಬುವುದು ಗೊತ್ತಾಗಿದೆ. ಸಾವಿರಾರು ಜನ ನಮ್ಮನ್ನು ಬಂದು ಭೇಟಿಯಾಗುತ್ತಾರೆ. ಆದರೆ, ಯುವರಾಜ್ ನಮ್ಮ ಮುಂದೆ ಆರ್‌ಎಸ್‌ಎಸ್ ಮುಖಂಡ, ಬಿಜೆಪಿ ಮುಖಂಡ ಅಂತ ಎಂದೂ ಹೇಳಿಲ್ಲ. ಬೇರೆಯವರ ಎದುರು ಆರ್‌ಎಸ್‌ಎಸ್ ಮುಖಂಡ ಅಂತ ಹೇಳಿದ್ದಾನೆ.
ವಂಚಕನ ಬಗ್ಗೆ ತನಿಖೆ ಪೂರ್ಣವಾದ ಬಳಿಕ ಸತ್ಯಾಸತ್ಯತೆ ಹೊರಬರುತ್ತೆ. ಕಾನೂನು ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
PublicNext
08/01/2021 05:36 pm