ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರಿನಲ್ಲಿ ಗೆಳತಿಯೊಂದಿಗೆ ಸಿಕ್ಕಿಬಿದ್ದ ಬಿಜೆಪಿ ಮುಖಂಡ; ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿದ ಪತ್ನಿ

ಯುಪಿ: ಬಿಜೆಪಿ ನಾಯಕನೊಬ್ಬ ತನ್ನ ಕಾರಿನಲ್ಲಿ ಗೆಳೆತಿಯೊಂದಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು, ನಡುರಸ್ತೆಯಲ್ಲೇ ಆತನ ಪತ್ನಿ ಚಪ್ಪಲಿಯಿಂದ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಬುಂದೇಲ್‌ಖಂಡ್ ಪ್ರದೇಶದ ಬಿಜೆಪಿ ನಾಯಕ ಮತ್ತು ಕಾರ್ಯದರ್ಶಿ ಮೋಹಿತ್ ಸೋಂಕರ್ ತನ್ನ ಗೆಳೆತಿಯೊಂದಿಗೆ ಕಾರಿನಲ್ಲಿ ರೆಡ್‌ಹ್ಯಾಂಡ್‌ಆಗಿ ಮೋಹಿತ್‌ ಸಿಕ್ಕಿಬಿದ್ದಾರೆ. ಇದರಿಂದ ಆಕ್ರೋಶಗೊಂಡ ಪತ್ನಿ, ಅತ್ತೆ-ಮಾವಂದಿರು ಸೇರಿ ಮೋಹಿತ್‌ಗೆ ಚಪ್ಪಲಿಯಿಂದ ಮನಬಂದಂತೆ ಥಳಿಸಿದ್ದಾರೆ.

ಅಷ್ಟೇ ಅಲ್ಲದೇ, ಮೋಹಿತ್ ಗೆಳತಿಗೂ ಥಳಿಸಲಾಗಿದೆ. ಇದರ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಜೂಹಿ ಪೊಲೀಸ್ ಠಾಣೆ ತಂಡವು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನಗೊಳಿಸಿದೆ. ಈ ಬಗ್ಗೆ ಬಿಜೆಪಿ ನಾಯಕನ ಪತ್ನಿ ಮೋನಿ ಸೋಂಕರ್ ಮತ್ತು ಸಿಕ್ಕಿಬಿದ್ದ ಮಹಿಳೆಯ ಪತಿ ಜೂಹಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ದೂರು ದಾಖಲಾಗಿದೆ.

Edited By : Abhishek Kamoji
PublicNext

PublicNext

21/08/2022 04:39 pm

Cinque Terre

90.92 K

Cinque Terre

22

ಸಂಬಂಧಿತ ಸುದ್ದಿ