ಕಲಬುರಗಿ: 30% ಕಮಿಷನ್ ದಂಧೆ ಇವತ್ತು-ನಿನ್ನೆಯದ್ದಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಕಮಿಷನ್ ದಂಧೆ ಇತ್ತು. ಆಗ ಈ ಬಗ್ಗೆ ನಾನು ಧ್ವನಿ ಎತ್ತಿದ್ದೆ. ಆದ್ರೆ ಕೆಲವು ಮಠಾಧೀಶರು ನನ್ನ ಬಾಯಿ ಮುಚ್ಚಿಸಿದರು. ಹೀಗಾಗಿ ನಾನು ಸುಮ್ಮನಿದ್ದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಮಠಕ್ಕೆ ಬಂದ ಅನುದಾನದಲ್ಲಿ 30% ಕಮಿಷನ್ ಕೊಡಬೇಕು ಎಂಬ ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, 2013ರಿಂದ ಸಿದ್ದರಾಮಯ್ಯ ಸರ್ಕಾರದಲ್ಲೇ 30% ಕಮಿಷನ್ ಆರಂಭವಾಗಿದೆ. ಆಗ ₹50 ಲಕ್ಷ ಅನುದಾನ ಪಡೆಯಲು ₹15 ಲಕ್ಷ ಕಮಿಷನ್ ಕೊಟ್ಟಿದ್ದೆ. ಆದ್ರೆ ಈ ವಿವಾದವನ್ನು ಈಗಿನ ಬಿಜೆಪಿ ಸರ್ಕಾರಕ್ಕೆ ಅಂಟಿಸುತ್ತಿರುವುದು ಕಳವಳಕಾರಿ. ಈ ಬಗ್ಗೆ ತನಿಖೆ ನಡೆಸಿದರೆ ಮಾತ್ರ ಸತ್ಯ ಬೆಳಕಿಗೆ ಬರಲಿದೆ ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
PublicNext
19/04/2022 12:28 pm