ವಿಜಯಪುರ: 'ನಾನು ಸಿಎಂಗೆ ಸವಾಲು ಹಾಕ್ತಾ ಇದ್ದೀನಿ. ರಾಜ್ಯದಲ್ಲಿ ಇರೋದು ಹಿಂದೂ ಸರ್ಕಾರ ಎಂದು ಒಮ್ಮೆಯಾದ್ರೂ ಹೇಳಿ. ಇನ್ಮುಂದೆ ಹಿಂದೂ ಕಾರ್ಯಕರ್ತರ ಕೂದಲು ಕೂಡ ಕೊಂಕಾದರೆ ನಾವು ಸುಮ್ಮನಿರೋಲ್ಲ. ನಮ್ಮಲ್ಲಿ ಆದಂತೆ ಉತ್ತರ ಪ್ರದೇಶದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಆಗುತ್ತಿಲ್ಲ. ರಾಜ್ಯದ ಶಾಸಕರು, ಮಂತ್ರಿಗಳು ಅಲ್ಲಿಗೆ ಹೋಗಿ ತರಬೇತಿ ಪಡೆದು ಬನ್ನಿ ಎಂದು ವಿಜಯಪುರದಲ್ಲಿ ಹಿಂದೂ ಕಾರ್ಯಕರ್ತೆ ಮಂಚಾಲೇಶ್ವರಿ ಒತ್ತಾಯಿಸಿದ್ದಾರೆ.
ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಮಂಚಾಲೇಶ್ವರಿ, ಇನ್ಮುಂದೆ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ಆಗಬಾರದು ಎಂದರೆ ಉತ್ತರ ಪ್ರದೇಶಕ್ಕೆ ಹೋಗಿ ತರಬೇತಿ ಪಡೆಯಿರಿ. ರಾಜ್ಯದಲ್ಲಿರುವುದು ಹಿಂದುತ್ವದ ಸರ್ಕಾರ ಎಂದು ಒಮ್ಮೆ ಗಂಡಸ್ತನದಿಂದ ಹೇಳಿ. ಆಮೇಲೆ ಹಿಂದೂಗಳೆಂದರೆ ಏನು ಎಂಬುದನ್ನು ನಾವು ತೋರಿಸುತ್ತೇವೆ. ಇದು ಹಿಂದೂಸ್ತಾನ್ ನಾವು ಮೂಲ ವಾರಸುದಾರರು. ಇದು ಹಿಂದೂ ರಾಷ್ಟ್ರ, ಇಲ್ಲಿ ಹಿಂದೂನೇ ಆಡಳಿತ ನಡೆಸುತ್ತಾನೆ. ನೀವೇನಾದರೂ ಕೈ ಕುಂಕ್ ಅಂದ್ರೆ ಪರಿಸ್ಥಿತಿ ನೆಟ್ಟಿಗೆ ಇರೋಲ್ಲ. ಕೇವಲ ಆರು ಜನ ಹೇಳಿದ ಮಾತು ಕೇಳಲಿಲ್ಲಂತ ಶಾಲೆ ಗೇಟ್ ಹೊರಗೆ ನಿಲ್ಲಿಸಿದ್ವಿ.ನಮ್ಮ ಧರ್ಮ, ನಮ್ಮ ಕುಂಕುಮ ವಿಷಯಕ್ಕೆ ಬಂದರೆ ನೀವೆಲ್ಲ ದೇಶದ ಗಡಿಯಾಚೆ ಇರುತ್ತೀರಿ. ಎಂದು ಮಂಚಾಲೇಶ್ವರಿ ಎಚ್ಚರಿಕೆ ನೀಡಿದ್ದಾರೆ.
PublicNext
24/02/2022 01:43 pm