ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಣ್ಣ ಗಡಿಯಾರ ಅಂಗಡಿ ಮಾಲೀಕ ಎಂದ; ಬ್ಯಾಂಕ್ ಬ್ಯಾಲೆನ್ಸ್​ ಪರಿಶೀಲಿಸಿದಾಗ ಬಯಲಾಯ್ತು 300 ಕೋಟಿ ಆಸ್ತಿಯ ಒಡೆಯ

ಲಕ್ನೋ: ರಾಜಕೀಯ ಪಕ್ಷ ಕಟ್ಟಿಕೊಂಡು ದೇಣಿಗೆ ಸಂಗ್ರಹಿಸುವ ವಿಚಾರದಲ್ಲಿ ನೋಂದಣಿಯಾಗದ ಹಲವು ರಾಜಕೀಯ ಪಕ್ಷಗಳಿಂದ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಿಕ್ಕಿದೆ.

ಆದಾಯ ತೆರಿಗೆ ಮೂಲಗಳ ಪ್ರಕಾರ, ಅಂತಹ ಕೆಲವು ರಾಜಕೀಯ ಪಕ್ಷದ ಅಧ್ಯಕ್ಷರು ಸಹ ಸಣ್ಣ ಗಡಿಯಾರ ಅಂಗಡಿಯನ್ನು ನಡೆಸುತ್ತಿರುವುದು ಕಂಡುಬಂದಿದ್ದು, ಅವರು ತಮ್ಮ ಜೀವನವನ್ನು ಅತ್ಯಂತ ಬಡತನದಲ್ಲಿ ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಆದ್ರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಹಾಗೂ ಬ್ಯಾಂಕ್ ವಿವರಗಳನ್ನು ಪರಿಶೀಲಿಸಿದಾಗ ಹೀಗೆ ಬಡತನದ ಬದುಕು ಸಾಗಿಸುತ್ತಿದ್ದಾತ ಬರೋಬ್ಬರಿ 300 ಕೋಟಿಗೂ ಅಧಿಕ ಆಸ್ತಿಯ ಒಡೆಯ ಎಂಬುದು ತಿಳಿದು ಬಂದಿದೆ.

ಕೈಗಡಿಯಾರ ಶಾಪ್​ ಮಾಲೀಕ ಉತ್ತರ ಪ್ರದೇಶದ ನಿವಾಸಿ ಅಬ್ದುಲ್ ಮಬೂದ್ ಇದರ್ಸಿ ಸಣ್ಣಗಲ್ಲಿ ಪ್ರದೇಶದಲ್ಲಿ ವಾಸಿಸುತ್ತಾರೆ. ಕೈಗಡಿಯಾರಗಳನ್ನು ತಯಾರಿ ಮತ್ತು ಮಾರಾಟಕ್ಕಾಗಿ ಪುಟ್ಟ ಅಂಗಡಿಯನ್ನೂ ಇಟ್ಟಿದ್ದಾರೆ. ತನ್ನ ಮಗ ತನಗೆ ಈ ಕೆಲಸದಲ್ಲಿ ಸಹಾಯ ಮಾಡುತ್ತಾನೆ. ಅಲ್ದೆ ತಾನೊಬ್ಬ ನಿರುದ್ಯೋಗಿ ಎಂದು ಬಣ್ಣಿಸಿದ್ದಾರೆ. ಆದರೆ ಐಟಿ ದಾಳಿ ವೇಳೆ ಅಚ್ಚರಿಯ ಮಾಹಿತಿ ಬಯಲಾಗಿದೆ. ಈತ 300 ಕೋಟಿ ಸಂಪತ್ತಿನ ಮಾಲೀಕರಾಗಿದ್ದರೂ ಯಾವುದೇ ಆದಾಯ ತೆರಿಗೆ ರಿಟರ್ನ್ ಸಲ್ಲಿಸುತ್ತಿಲ್ಲ.

ದೆಹಲಿಯಲ್ಲಿ ಒಂದು ಕಡೆ ಸೇರಿ ಉತ್ತರ ಪ್ರದೇಶದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೀಗಿರುವಾಗ ಈ ಅಚ್ಚರಿಯ ವಿಚಾರ ಬಯಲಿಗೆ ಬಂದಿದೆ. ಏಕಕಾಲದಲ್ಲಿ ಹಲವೆಡೆ ಐಟಿ ದಾಳಿ ಹೌದು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಶಂಕಿತ 'ನಿಧಿ', ಎಫ್‌ಸಿಆರ್‌ಎ ಉಲ್ಲಂಘನೆ ಮತ್ತು ಆಪಾದಿತ ತೆರಿಗೆ ವಂಚನೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಆದಾಯ ತೆರಿಗೆ ಇಲಾಖೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದೆ.

ಗುಜರಾತ್, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಹರಿಯಾಣ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಏಕಕಾಲದಲ್ಲಿ 110 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಮತ್ತು ಅವುಗಳ ಅನುಮಾನಾಸ್ಪದ ವಹಿವಾಟುಗಳ ಮೇಲೆ ದಾಳಿ ನಡೆಸಲಾಯ್ತು.

ಈ ಅವಧಿಯಲ್ಲಿ ಅಕ್ರಮವಾಗಿ ಗಳಿಸಿದ ಹಣವನ್ನು ರಾಜಕೀಯ ಪಕ್ಷಗಳಿಗೆ ನೀಡಿರುವ ಕೆಲ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Edited By : Abhishek Kamoji
PublicNext

PublicNext

12/09/2022 03:20 pm

Cinque Terre

38.63 K

Cinque Terre

0

ಸಂಬಂಧಿತ ಸುದ್ದಿ