ತುಮಕೂರು: ಮುರುಘಾ ಶರಣರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು ಮಾಡಿರುವುದು ತಪ್ಪು.ಮೊದಲು ಸಂಪೂರ್ಣವಾಗಿ ತನಿಖೆಯಾಗಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘ ಮಠ ಬಾರಿ ದೊಡ್ಡ ಮಠ. ಈ ಪ್ರಕರಣದ ಹಿಂದೆ ಏನಿದೆ ಎನ್ನುವ ಸತ್ಯಾಂಶ ಗೊತ್ತಾಗಬೇಕು. ಮುರುಘಾ ಸ್ವಾಮಿಗಳು ಯಾವತ್ತೂ ಪರಿವರ್ತನೆಗಾಗಿ ಹೋರಾಟ ಮಾಡಿಕೊಂಡು ಬಂದವರು.
ಪರಿವರ್ತನೆ ಮಾಡುವಂತವರ ಹಣೆ ಮೇಲೆ ಯಾವತ್ತೂ ಕತ್ತಿ ತೂಗ್ತಾ ಇರುತ್ತೆ. ಹಾಗಾಗಿ ಪೊಲೀಸರು ಆತುರ ತೋರಿದ್ದಾರೆ ಎಂದರು.
ಪ್ರಕರಣವನ್ನು ಮೊದಲು ಕೂಲಂಕಷವಾಗಿ ತನಿಖೆ ಮಾಡಲಿ. ಆಗ ಸತ್ಯಾಂಶ ಏನು? ಅನ್ನೋದು ಕಂಡು ಬಂದ್ರೆ ಆಮೇಲೆ ಬೇಕಾದ್ರೆ ಕ್ರಮ ಕೈಗೊಳ್ಳಲಿ. ಇದು ಭಕ್ತರಲ್ಲಿ ಆತಂಕವನ್ನು ಉಂಟು ಮಾಡಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಈ ಬಗ್ಗೆ ಗಮನ ಹರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
PublicNext
28/08/2022 11:47 am